ಮಾನವ ಶಕ್ತಿ ಸಮರ್ಥ ಬಳಕೆಯಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ: ಆದಿಶ್ರೀ

ದಿಗಂತ ವರದಿ ನಾಗಮಂಗಲ (ಆದಿಚುಂಚನಗಿರಿ) :

ಮಾನವ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಆದಿಚುಂಚನಗಿರಿ ಪೀಠಾಧ್ಯಕ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಆದಿ ಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಸಿಗುವ ಎಲ್ಲಾ ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳುವ ಶಕ್ತಿ ಇರುವ ಸಂಪತ್ತು ಮಾನವ ಸಂಪತ್ತು. ಈ ಮಾನವ ಶಕ್ತಿಯನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳದೆ ಇದ್ದರೆ ಅದು ವ್ಯರ್ಥವಾಗುತ್ತದೆ. ಮಾನವ ಸಂಪನ್ಮೂಲ ಸದ್ಭಳಕೆಯಾಗದಿದ್ದರೆ ದೇಶದ ಅಭಿವೃದ್ಧಿಯೂ ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತಿ ದೊಡ್ಡದು ಎಂದರು.
ಮನುಷ್ಯ ಅಣುವನ್ನು ಬೇಧಿಸಿ ಬಾಂಬ್ ತಯಾರಿಸುವ ಸಾಮರ್ಥ್ಯ ಹೊಂದಿದ್ದಾನೆ. ಆದರೆ, ಸಮಾಜದಲ್ಲಿರುವ ಒಡಕು, ತನ್ನೊಳಗಿನ ಹೃದಯದಲ್ಲಿ ಒಡಕುಗಳನ್ನು ಕೂಡಿಸುವಲ್ಲಿ ವಿಲನಾಗಿದ್ದೇನೆ. ಹೃದಯಗಳನ್ನು ಕೂಡಿಸುವ ಶಕ್ತಿಯ ಕಲೆಯನ್ನು ಮೈಗೂಡಿಸಿಕೊಂಡರೆ ದೇಶವನ್ನು ಸಮರ್ಥವಾಗಿ ಕಟ್ಟಲು ಸಾಧ್ಯ ಎಂದು ನುಡಿದರು.
ಯುವಜನಮೇಳದಲ್ಲಿ ಹಲವು ಸ್ಪರ್ಧೆಗಳಿವೆ. ಪ್ರತಿಯೊಂದು ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕು. ಯುವಜನೋತ್ಸವದಿಂದ ಆಗುವ ಕಲೆಯ ಸಮ್ಮಿಲನ ದೇಶದ ಏಕತೆಗೆ ಸಹಕಾರಿಯಾಗಲಿದೆ. ಕನ್ನಡಮ್ಮನ ಮಕ್ಕಳಾಗಿ ಭಾರತಮ್ಮನ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಲು ನೀವು ಸಜ್ಜಾಗಿದ್ದೀರಿ. ಈ ಕಾರ್ಯಕ್ರಮ ನಿಮಗೆ ಮಾರ್ಗದರ್ಶನವಾಗಿದೆ ಎಂದು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!