ಮಧುಬಾಲಾ ಖ್ಯಾತಿಯ ನಟಿ ದೃಷ್ಟಿ ಧಾಮಿಗೆ ಕೊರೋನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧುಬಾಲಾ ಖ್ಯಾತಿಯ ನಟಿ ದೃಷ್ಟಿ ಧಾಮಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ ಅವರು, ನನಗೆ ಯಾವುದೇ ಗಂಭೀರ ಕೊರೋನಾ ಸಮಸ್ಯೆ ಇಲ್ಲ. ನಾನು ಈ ಹೂವುಗಳ ವಾಸನೆ ಮತ್ತು ಚಾಕೊಲೇಟ್ ಅನ್ನು ಆಸ್ವಾದಿಸಬಹುದು ಎಂದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ನಟಿಯ ಪೋಸ್ಟ್ ಗೆ ಬಾಲಿವುಡ್​​ನ ಸೆಲೆಬ್ರಿಟಿಗಳು ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.
ನಟಿ ದೃಷ್ಟಿ ಧಾಮಿ ‘ಮಧುಬಾಲಾ ಏಕ್ ಇಷ್ಕ್ ಏಕ್ ಜುನೂನ್’, ‘ಏಕ್ ಥಾ ರಾಜಾ ಏಕ್ ಥಿ ರಾಣಿ’ ಮತ್ತು ‘ಸಿಲ್ಸಿಲಾ ಬದಲ್ತೆ ರಿಶ್ಟನ್ ಕಾ’ ನಂತಹ ಟಿವಿ ಶೋಗಳಲ್ಲಿನ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!