Sunday, June 26, 2022

Latest Posts

ಮುಂಬೈನಲ್ಲಿ ಕಟ್ಟಡ ಕುಸಿತ : ಓರ್ವ ಸಾವು 16 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಾಣಿಜ್ಯನಗರಿ ಮುಂಬೈನಲ್ಲಿ ನಿನ್ನೆ ತಡರಾತ್ರಿ ಅವಘಡ ಸಂಭವಿಸಿದ್ದು ಕಟ್ಟಡ ಕುಸಿತದಲ್ಲಿ ಓರ್ವ ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿದ್ದಾರೆ.

ನಿನ್ನೆ ತಡರಾತ್ರಿ 12.15ರ ಸುಮಾರಿಗೆ ಬಾಂದ್ರಾ ವೆಸ್ಟ್‌ನ ಶಾಸ್ತ್ರಿನಗರ ಪ್ರದೇಶದಲ್ಲಿ ಕಟ್ಟಡ ಕುಸಿತವುಂಟಾಗಿದೆ. ದುದೃಷ್ಟವಶಾತ್‌ ಒಬ್ಬರು ಸಾವನ್ನಪ್ಪಿದ್ದಾರೆ ಉಳಿದಂತೆ ಗಾಯಗೊಂಡಿರುವ 16 ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಟ್ವೀಟ್ ಮಾಡಿದೆ.

ಎಲ್ಲರೂ ಬಿಹಾರ ಮೂಲದ ಕಾರ್ಮಿಕರು ಎನ್ನಲಾಗಿದ್ದು ಪೋಲೀಸರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಹಲವರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss