ಪ್ರವಾಸೋದ್ಯಮಕ್ಕೆ ಉತ್ತೇಜನ: ಜೂನ್‌ 21ರಂದು ಭಾರತ್ ಗೌರವ್ ಪ್ರವಾಸಿ ರೈಲಿನ ಚೊಚ್ಚಲ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್‌ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಭಾರತೀಯ ರೈಲ್ವೆ ʻಭಾರತ್ ಗೌರವ್ ಯೋಜನೆʼಯ ಪ್ರವಾಸಿ ರೈಲು ಜೂನ್ 21 ರಂದು ತನ್ನ ಚೊಚ್ಚಲ ಪ್ರಯಾಣವನ್ನು ಪ್ರಾರಂಭಿಸಲಿದೆ. ಈ ಪ್ರವಾಸಿ ರೈಲಿನ ಮೂಲಕ ಎರಡು ದೇಶಗಳನ್ನು ಸಂಪರ್ಕಿಸುವ ವ್ಯವಸ್ಥೆಯಾಗಲಿದೆ. ಜೂನ್ 21 ರಂದು ದೆಹಲಿಯಿಂದ ಭಾರತ್ ಗೌರವ್ ಪ್ರವಾಸಿ ರೈಲು ಹೊರಡಲಿದೆ ಎಂದು ಭಾರತೀಯ ರೈಲ್ವೆ ಅಧಿಕೃತವಾಗಿ ಹೇಳಿದೆ. ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಹೊರಡುವ ರೈಲು, ಭಾರತ ಮತ್ತು ನೇಪಾಳದ ನಡುವೆ ಸರಿಸುಮಾರು 8,000 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸುತ್ತದೆ.

ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಒಳಗೊಂಡ “ಸ್ವದೇಶ್ ದರ್ಶನ” ಯೋಜನೆಯಡಿ ಗುರುತಿಸಲಾದ ರಾಮಾಯಣ ಸರ್ಕ್ಯೂಟ್‌ನಲ್ಲಿ ಈ ರೈಲು ಚಲಿಸುತ್ತದೆ. ರೈಲಿನಲ್ಲಿ ನೇಪಾಳದಲ್ಲಿರುವ ಜನಕ್‌ಪುರದಲ್ಲಿರುವ ರಾಮ್ ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡುವುದು ಈ ಪ್ರವಾಸದ ಭಾಗವಾಗಿದೆ. IRCTC ಪ್ರಕಾರ, 600 ಜನರ ಸಾಮರ್ಥ್ಯದ ರೈಲು ಅಯೋಧ್ಯೆ, ಬಕ್ಸರ್, ಜನಕ್‌ಪುರ, ಸೀತಾಮರ್ಹಿ, ಕಾಶಿ, ಪ್ರಯಾಗ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಸೇರಿದಂತೆ ಪ್ರಮುಖ ನಗರಗಳನ್ನು ಒಳಗೊಂಡಿದೆ.

ಭಾರತ್ ಗೌರವ್ ಟೂರಿಸ್ಟ್ ರೈಲು ಪ್ರವಾಸವು ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ತನ್ನ ಮೊದಲ ನಿಲುಗಡೆನ್ನು ಹೊಂದಿದೆ. ಅಲ್ಲಿ ಪ್ರವಾಸಿಗರು ಶ್ರೀ ರಾಮ ಜನ್ಮಭೂಮಿ ದೇವಾಲಯ ಮತ್ತು ಹನುಮಾನ್ ದೇವಾಲಯ ಹಾಗೂ ನಂದಿಗ್ರಾಮ್‌ನಲ್ಲಿರುವ ಭಾರತ ಮಂದಿರಕ್ಕೆ ಭೇಟಿ ನೀಡಬಹುದು. ಕೊರೊನಾ ಸಮಯವಾದ್ದರಿಂದ IRCTC ಎಲ್ಲಾ ಪ್ರವಾಸಿಗರಿಗೆ ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಹೊಂದಿರುವ ಸುರಕ್ಷತಾ ಕಿಟ್ ಅನ್ನು ಸಹ ಒದಗಿಸುತ್ತದೆ. ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ ಸುಮಾರು 65,000 ರೂಪಾಯಿ ಖರ್ಚಾಗಲಿದ್ದು, ಈ ಪ್ರವಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಕೆಲ ರಾಜ್ಯಗಳನ್ನು ಒಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!