Thursday, December 8, 2022

Latest Posts

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳವಿಗೆ ಯತ್ನ: ನಾಲ್ವರು ಖದೀಮರು ಪೊಲೀಸರ ಅತಿಥಿ

ಹೊಸದಿಗಂತ ವರದಿ, ಬನವಾಸಿ:

ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬನವಾಸಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕಳ್ಳತನದಲ್ಲಿ ಶಾಮೀಲಾದ ನಾಲ್ವರೂ ಬನವಾಸಿ ಪಟ್ಟಣದವರೇ ಆಗಿದ್ದು ಜನತಾ ಕಾಲೋನಿಯ ಕೂಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕೈಫ್ ಶಿರಗೋಡ (19)ವಿದ್ಯಾರ್ಥಿಯಾದ ವಿಶ್ವ ಮಹೇಶ ಪಾವಸ್ಕರ(21)
ಯಾಸೀನ್ ಬಾಷಾಸಾಬ್ ( 18 ) ಕೃಷಿ ಕೆಲಸ ಮಾಡುವ ರಿಯಾಜ್ ಇಕ್ಬಾಲ್ ಚೌಧರಿ(19) ಬಂಧಿತರಾಗಿದ್ದಾರೆ.
ಇವರು ಸೆ.7ರಂದು ಬನವಾಸಿಯ ಖಲೀಲ ಅಬ್ದುಲ್ ಅಜೀಂ ಶೇಖ್ ಅವರ ಮನೆಯಲ್ಲಿ ಕಳ್ಳತನ ನಡೆಸಿ ಮನೆಯಲ್ಲಿಟ್ಟಿದ್ದ ಸುಮಾರು 2.55 ಲಕ್ಷ ರೂ. ನಗದು ಹಣ ಹಾಗೂ
4 ಗ್ರಾಂ ತೂಕದ ಬಂಗಾರದ ಉಂಗುರಗಳನ್ನು ಕದ್ದಿದ್ದರು.
ಆರೋಪಿತರ ಪೈಕಿ ಮಹಮ್ಮದ್ಕೈ ಫ್ ಕಳೆದ ಫೆಬ್ರವರಿಯಲ್ಲಿ ಬನವಾಸಿಯ ಸುವರ್ಣಾ ಮಾಲತೇಶ ಅವರ ಮನೆಯಲ್ಲಿಯು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ ಹಣ ಮತ್ತು ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್.ಪಿ. ಸುಮನ್ ಪೆನ್ನೆಕರ್ ಮಾರ್ಗದರ್ಶನದಲ್ಲಿ ಶಿರಸಿ ಪೋಲಿಸ್ ಉಪಾಧೀಕ್ಷಕ ರವಿ ಡಿ.ನಾಯ್ಕ್, ಸಿ.ಪಿ.ಐ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಪಿಎಸ್ಐಗಳಾದ ಹನುಮಂತ ಬಿರಾದರ ಹಾಗೂ ಚಂದ್ರಕಲಾ ಪತ್ತಾರ,ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಸಂತೋಷ, ಪ್ರಸಾದ ಮಡಿವಾಳ, ಬಸವರಾಜ್ ಜಾಡರ, ಎಮ್.ಮೈಲಾರಪ್ಪ, ಉದಯ ಗುನಗಾ, ರಮೇಶ ನಾಯ್ಕ್ ಕಾರ್ಯಚರಣೆ ನಡೆಸಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!