ಚೀನಾಗೆ ಉಚಿತ ಲಸಿಕೆ ಆಫರ್‌ ಮಾಡಿದ ಯುರೋಪಿಯನ್‌ ಒಕ್ಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಚೀನಾದಲ್ಲಿ ಕೋವಿಡ್‌ ಉಲ್ಬಣಿಸಿರುವ ಹಿನ್ನೆಲೆಯೆಲ್ಲಿ ಅದನ್ನು ನಿಯಂತ್ರಿಸಲು ಚೀನಾ ಸರ್ಕಾರ ಹೆಣಗಾಡುತ್ತಿದೆ. ಹೀಗಾಗಿ ಕೋವಿಡ್‌ ಹತ್ತಿಕ್ಕುವಲ್ಲಿ ಚೀನಾಗೆ ಸಹಾಯನೀಡಲು ತಯಾರಿರುವುದಾಗಿ ಮೊನ್ನೆಯಷ್ಟೇ ಚೀನಾದ ಶತ್ರುರಾಷ್ಟ್ರಗಳಲ್ಲೊಂದಾದ ತೈವಾನ್‌ ಹೇಳಿತ್ತು. ಇದೀಗ ಯುರೋಪಿಯನ್‌ ಒಕ್ಕೂಟವು ಚೀನಾಗೆ ಉಚಿತ ಲಸಿಕೆ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದೆ.

ಆದರೆ ಚೀನಾ ಈ ಪ್ರಸ್ತಾಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಯುರೋಪಿಯನ್‌ ಒಕ್ಕೂಟದ ವಕ್ತಾರರು ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ. ಅಲ್ಲದೇ ಲಸಿಕೆಗಳ  ಪ್ರಮಾಣ ಇತ್ಯಾದಿಗಳ ಕುರಿತಾಗಿಯೂ ಯುರೋಪಿಯನ್‌ ಒಕ್ಕೂಟವು ಸ್ಪಷ್ಟಪಡಿಸಿಲ್ಲ ಎನ್ನಲಾಗಿದೆ.

ಚೀನಾದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚೀನಾಗೆ ಅಗತ್ಯವಿರುವ ಬೆಂಬಲ ನೀಡಲು ಯುರೋಪಿಯನ್‌ ಒಕ್ಕೂಟದ  ಆರೋಗ್ಯ ಕಮೀಷನರ್‌ ಸ್ಟೆಲ್ಲಾ ಕಿರಿಯಾಕಿಡ್ಸ್ ಚೀನಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಚೀನಾ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಅವರು “ಚೀನಾದ ವ್ಯಾಕ್ಸಿನೇಷನ್ ದರ ಮತ್ತು ಚಿಕಿತ್ಸಾ ಸಾಮರ್ಥ್ಯವು ಹೆಚ್ಚುತ್ತಲೇ ಇದೆ. ಸರಬರಾಜು ಮತ್ತು ಉತ್ಪಾದನೆ ಸಾಕಷ್ಟಿದೆ” ಎಂದು ಹೇಳಿದ್ದಾರೆ ಎಂದು ರಾಯಿಟರ್ಸ್‌ ವರದಿ ಉಲ್ಲೇಖಿಸಿದೆ. ಅಲ್ಲದೇ ಚೀನಾ ತನ್ನ ಸಾಂಕ್ರಾಮಿಕ ಸವಾಲುಗಳನ್ನು ಉತ್ತಮವಾಗಿ ಎದುರಿಸಲು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಒಗ್ಗಟ್ಟು ಮತ್ತು ಸಹಕಾರವನ್ನು ಬಲಪಡಿಸಲು ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!