ಹೊಸದಿಗಂತ ವರದಿ, ವಿಜಯಪುರ:
ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ, ಬಸ್ ನಲ್ಲಿದ್ದ ಇಬ್ಬರು ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ ಬುಧವಾರ ನಡೆದಿದೆ.
ಇನ್ನು ಮೃತಪಟ್ಟಿರುವ ಇಬ್ಬರು ಹೆಸರು ಲಭ್ಯವಾಗಿಲ್ಲ. ಅಲ್ಲದೇ, ಐವರು ಗಾಯಗೊಂಡಿದ್ದು, ಗಾಯಾಳುಗಳು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಥಣಿಯಿಂದ ವಿಜಯಪುರ ಮಾರ್ಗವಾಗಿ ಗಾಣಗಾಪುರಕ್ಕೆ ಹೊರಟಿದ್ದ ಬಸ್ ಹಾಗೂ ಕಲಬುರಗಿಯಿಂದ ವಿಜಯಪುರದ ಕಡೆಗೆ ಹೊರಟಿದ್ದ ಲಾರಿ ಮಧ್ಯೆ ಅಪಘಾತ ನಡೆದಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.