ಯೋಗ ಎಂದರೆ ಜೀವನ, ಆರೋಗ್ಯ, ಇಲ್ಲಿ ಜಾತಿ ಮತ ಬೇಧವಿಲ್ಲ: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿ , ಜನತೆಯನ್ನುದ್ದೇಶಿ ಮಾತನಾಡಿದರು.

ಯೋಗ ಎಂದರೆ ಬರೀ ವ್ಯಾಯಾಮ ಪದ್ಧತಿ ಅಲ್ಲ, ಅದೊಂದು ಜೀವನ ವಿಧಾನ. ಯೋಗವು ಜನರನ್ನು ಒಗ್ಗೂಡಿಸುವ ಜತೆಗೆ ಆರೋಗ್ಯವಾಗಿಡುವಂತೆ ಮಾಡುತ್ತದೆ ಎಂದು ಮೋದಿ ಯೋಗದ ಮಹತ್ವ ಸಾರಿದರು.

ಹಲವರು ಸೂರ್ಯ ಮೂಡುವ ಮುನ್ನವೇ ಎದ್ದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೀರಿ. ಎಲ್ಲರಿಗೂ ಧನ್ಯವಾದ. ಇಂದು ಎಲ್ಲಾ ರಾಷ್ಟ್ರದ ಪ್ರತಿನಿಧಿಗಳು ಈ ಯೋಗದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 9 ವರ್ಷಗಳ ಹಿಂದೆ ಇದೇ ಜಾಗವಾದ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಪ್ರಸ್ತಾವನೆ ಮುಂದಿಟ್ಟಾಗ, ಎಲ್ಲಾ ರಾಷ್ಟ್ರಗಳ ಒಂದಾಗಿ ಭಾರತದ ಆಲೋಚನೆಗೆ ಸಮ್ಮತಿ ಸೂಚಿಸಿತ್ತು. 2015ರಲ್ಲಿ ವಿಶ್ವ ಸಂಸ್ಥೆಯಲ್ಲಿ ಯೋಗಿದಿನಾಚರಣೆ ಸ್ಮಾರಕ ನಿರ್ಮಾಣ ಮಾಡಲಾಯಿತು ಎಂದು ಮೋದಿ ಹೇಳಿದ್ದಾರೆ.

ಯೋಗವು ಆರೋಗ್ಯದ ಗುಟ್ಟಾಗಿದ್ದು, ಯೋಗವು ಎಲ್ಲರಿಗೂ ಮುಕ್ತ. ಕಳೆದ ವರ್ಷ ಭಾರತ ಮಂದಿಟ್ಟ ಸಿರಿಧಾನ್ಯ ವರ್ಚಾರಣೆಗೂ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದೆ. ಯೋಗ ಭಾರತದಿಂದ ಬಂದಿದೆ. ಇದು ಅತ್ಯಂತ ಹಳೇ ಸಂಪ್ರದಾಯವಾಗಿದೆ. ಯೋಗ ಯಾವುದೇ ಕಾಪಿರೈಟ್ಸ್ ಹೊಂದಿಲ್ಲ, ಯಾವುದೇ ಪಾವತಿ ಇಲ್ಲ. ಯೋಗ ಎಲ್ಲರ ಆರೋಗ್ಯಕ್ಕಾಗಿ, ಯಾವುದೇ ಜಾತಿ ಮತ ಬೇಧವಿಲ್ಲದೆ ಮಾಡಬಹುದು ಎಂದು ಮೋದಿ ಹೇಳಿದ್ದಾರೆ.

ಯೋಗ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತೀ ಮುಖ್ಯ. ಜೀವನದ ಶೈಲಿಯಾಗಿದೆ. ಇದು ಅಳವಡಿಸಿಕೊಂಡ ವ್ಯಕ್ತಿ ದೈಹಕವಾಗಿ, ಮಾನಸಿಕವಾಗಿ ಸದೃಡವಾಗುತ್ತಾರೆ. ಇಲ್ಲಿರುವ ಹಲವರು ವೈಜ್ಞಾನಿಕವಾಗಿ ಯೋಗವನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು.

ಭಾರತದ ಕರೆಯ ಮೇರೆಗೆ ಹಿಂದೆಂದೂ ಕಂಡರಿಯದಂತೆ 180 ಕ್ಕೂ ಹೆಚ್ಚು ದೇಶಗಳು ಒಟ್ಟಿಗೆ ಸೇರಿರುವುದು ಐತಿಹಾಸಿಕ. ಯೋಗವನ್ನು ಜಾಗತಿಕ ಆಂದೋಲನ ಮಾಡಲು 2014 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪ್ರಸ್ತಾವನೆ ಮಂಡಿಸಿದಾಗ ದಾಖಲೆ ಪ್ರಮಾಣದಲ್ಲಿ ಬೆಂಬಲ ದೊರೆಯಿತು ಮತ್ತು ಅಂತಾರಾಷ್ಟ್ರೀಯ ಯೋಗ ದಿನವನ್ನು ಇದೀಗ ಜಾಗತಿಕ ಸ್ಫೂರ್ತಿಯಿಂದ ಆಚರಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಸ್ವಚ್ಛ ಭಾರತ ಮತ್ತು ಭಾರತದ ನವೋದ್ಯಮ ಅಭಿಯಾನ ಕುರಿತು ಮಾತನಾಡಿದ ಮೋದಿ, ಇದರಿಂದ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಸಾಧ್ಯವಾಗಿದೆ ಮತ್ತು ದೇಶದ ಸಂಸ್ಕೃತಿಯ ಅಸ್ಮಿತೆಯನ್ನು ಪುನರ್‌ ಸ್ಥಾಪಿಸಲಾಗಿದೆ ಹಾಗೂ ಈ ವಲಯಕ್ಕೆ ದೇಶ ಮತ್ತು ಯುವ ಸಮೂಹ ಅನನ್ಯ ಕಸುವು ತುಂಬಿದೆ. ಇಂದು ದೇಶದ ಜನರ ಮನಸ್ಥಿತಿ ಬದಲಾಗಿದ್ದು, ಜನ ಮತ್ತು ಅವರ ಬದುಕನ್ನು ಬದಲಾವಣೆಯತ್ತ ಕೊಂಡೊಯ್ಯಲು ಕೊಡುಗೆ ನೀಡಿದೆ ಎಂದರು.

ಇದಕ್ಕೂ ಮೊದಲು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರ‍್ರೆಸ್‌ ಅವರು ಮಾತನಾಡಿ, ಯೋಗವು ವಿಶ್ವಮಟ್ಟದಲ್ಲಿ ಪಸರಿಸಲು ಮೋದಿ ಅವರ ಕೊಡುಗೆ ಅಪಾರವಾಗಿದೆ. ಇಂದು ಜಗತ್ತೇ ಯೋಗವನ್ನು ಅಳವಡಿಸಿಕೊಂಡಿದೆ. ಸದೃಢ ಸಮಾಜದ ನಿರ್ಮಾಣಕ್ಕಾಗಿ ಯೋಗವನ್ನು ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ವಿಶ್ವಸಂಸ್ಥೆಯಲ್ಲಿ ಯೋಗಭ್ಯಾಸ
ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಓಂಕಾರ ಮೊಳಗಿದೆ. ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಯೋಗಭ್ಯಾಸ ಮಾಡಿದ್ದಾರೆ. ವಿಶ್ವಸಂಸ್ಥೆ ಆವರಣದಲ್ಲಿ ಆಯೋಯಿಸಿದ್ದ 9ನೇ ವರ್ಷದ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಮೋದಿ ಯೋಗ ಮಾಡಿದ್ದಾರೆ. ಪ್ರಧಾನಿ ಮೋದಿ ಜೊತೆಗೆ 180 ರಾಷ್ಟ್ರದ ಪ್ರತಿನಿಧಿಗಳು, ವಿಶ್ವಸಂಸ್ಥೆ ಅಧಿಕಾರಿಗಳು, ನ್ಯೂಯಾರ್ಕ್ ಮೇಯರ್, ಅನಿವಾಸಿ ಭಾರತೀಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!