ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಜಾರ್ಗ್ರಾಮ್‌ನಲ್ಲಿ ತೆರಳುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಯೇ ಝಲ್ಮುರಿ ತಯಾರಿಸಿಕೊಟ್ಟಿದ್ದ ಸ್ಥಳೀಯ ಅಂಗಡಿಗೆ ಭೇಟಿ ನೀಡಿದ್ದು, ಎಲ್ಲಡೆ ವೈರಲ್ ಆಗಿತ್ತು. ಇದೀಗ ಅದೇ ಅಂಗಡಿಯವನಿಗೆ ಬೆದರಿಕೆ ಕರೆ ಬಂದಿದೆ.
ಜಾರ್ಗ್ರಾಮ್ ಪ್ರದೇಶದ ವಿಕ್ರಮ್ ಸಾಹು ಎಂಬ ಝಲ್ಮುರಿ ಮಾರಾಟಗಾರನಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಬರುತ್ತಿದ್ದು, ಇಡೀ ಕುಟುಂಬವನ್ನು ಆತಂಕಕ್ಕೆ ದೂಡಿದೆ.
ಬಾಂಬ್‌ಗಳಿಂದ ಸ್ಫೋಟಿಸುವ ಬೆದರಿಕೆ
ಈ ಕುರಿತು ವಿಕ್ರಮ್ ಸಾಹು ಬೇಸರ ಹೊರಹಾಕಿದ್ದು, ಬೇರೆ ಬೇರೆ ನಂಬರ್ ಗಳಿಂದ ನನಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವೀಡಿಯೊ ಮತ್ತು ಫೋನ್ ಮೂಲಕ ಬೆದರಿಕೆ ಕರೆಗಳು ಬರುತ್ತಿವೆ. ನನ್ನನ್ನು ಬಾಂಬ್‌ಗಳಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನ್ನನ್ನು ಹೆದರಿಸಲು ಭಯಾನಕ ಸನ್ನೆಗಳನ್ನು ಮಾಡುತ್ತಿದ್ದಾರೆ ಮತ್ತು ಶಸ್ತ್ರಾಸ್ತ್ರಗಳನ್ನು ಸಹ ತೋರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ಪ್ರಕರಣ ದಾಖಲು
ಇದರಿಂದ ವಿಕ್ರಮ್ ಮತ್ತು ಅವರ ಕುಟುಂಬಸ್ಥರು ತೀವ್ರ ಭೀತಿಗೊಳಗಾಗಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ಲಿಖಿತ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಸೈಬರ್ ವಿಭಾಗವು ತನಿಖೆಯನ್ನು ಕೈಗೆತ್ತಿಕೊಂಡಿದೆ.



