ಗೆಲುವಿನ ಸಂಭ್ರಮಾಚರಣೆಯಿಂದ ಅಲಿ,ರಶೀದ್ ಅನ್ನು ಹೊರಕಳುಹಿಸಿದ ಬಟ್ಲರ್: ನಾಯಕನ ನಡೆಯನ್ನು ಕೊಂಡಾಡಿದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ-20 ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಗೆದ್ದ ಇಂಗ್ಲೆಂಡ್ ತಂಡ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದು, ಆದರೆ ಈ ವೇಳೆ ನಾಯಕ ಜೋಸ್ ಬಟ್ಲರ್, ತಂಡದ ಸಹ ಆಟಗಾರರಾದ, ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಅವರನ್ನು ಸಂಭ್ರಮಾಚರಣೆಯಿಂದ ಹೊರ ಹೋಗುವಂತೆ ಹೇಳಿದ್ದಾರೆ.

ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ 5 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ 2ನೇ ಬಾರಿ ಟಿ20 ವಿಶ್ವಕಪ್‍ಗೆ ಮುತ್ತಿಕ್ಕಿತು. ಈ ಗೆಲುವಿಗಾಗಿ ಇಂಗ್ಲೆಂಡ್ ತಂಡದ ಪ್ರತಿಯೊಬ್ಬ ಆಟಗಾರರು ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದರು. ಹೀಗಾಗಿ ಈ ಗೆಲುವು ಎಲ್ಲರ ಖುಷಿಯನ್ನು ಇಮ್ಮಡಿಗೊಳಿಸಿತು.

ಆದ್ರೆ ಈ ಸಂಭ್ರಮ ವೇಳೆಬಟ್ಲರ್ ಸಹ ಆಟಗಾರರಿಬ್ಬರನ್ನು ಹೊರ ಹೋಗಿ ಎಂದು ಹೇಲಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನು ನೋಡಿದ ಅನೇಕರ ಬಟ್ಲರ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಬಟ್ಲರ್ ನಡೆಯನ್ನು ಯಾರು ಟೀಕಿಸದೆ , ಹೊಗಳಿದ್ದಾರೆ. ಯಾಕೆ ಅಂದರೆ , ತಂಡದ ಸಹ ಆಟಗಾರರಾದ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್, ಇಸ್ಲಾಂ ಧರ್ಮಕ್ಕೆ ಸೇರಿದವರು. ಈ ಧರ್ಮದಲ್ಲಿ ಇವರಿಗೆ ಶಾಂಪೇನ್(ಮದ್ಯ) ನಿಷೇಧ. ಹಾಗಾಗಿ ಇಸ್ಲಾಂ ಧರ್ಮದಲ್ಲಿ ಮದ್ಯ ನಿಷೇಧ ಎಂಬುವುದನ್ನು ಅರಿತಿದ್ದ ಬಟ್ಲರ್, ಸಂಭ್ರಮಾಚರಣೆ ವೇಳೆ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಅವರನ್ನು ಹೊರ ಕಳುಹಿಸಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಶಾಂಪೇನ್ ಬಾಟಲ್ ತೆರೆದು ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಮುಂದುವರಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಬಟ್ಲರ್ ನಡೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!