July 27, 2026
Monday, July 27, 2026
spot_img

ಸಮಾಜ ಸೇವೆಗೆ ಕರೆ: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟ ಧನುಷ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಧನುಷ್ ಅವರ ಇತ್ತೀಚಿನ ಹೇಳಿಕೆ ತಮಿಳು ಚಿತ್ರರಂಗದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಚೆನ್ನೈನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಸಕ್ರಿಯರಾಗುವಂತೆ ಕರೆ ನೀಡಿದರು.

ಅಭಿಮಾನಿಗಳ ಒಗ್ಗಟ್ಟಿನಲ್ಲಿ ದೊಡ್ಡ ಶಕ್ತಿ ಇದೆ. ಆ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಧನುಷ್ ಹೇಳಿದರು. ಇದೇ ವೇಳೆ ಅಭಿಮಾನಿ ಸಂಘದ ಹೊಸ ಧ್ವಜವನ್ನೂ ಅನಾವರಣಗೊಳಿಸಿದರು.

ಇದನ್ನೂ ಓದಿ:

ಈ ಬೆಳವಣಿಗೆಯಿಂದ ಧನುಷ್ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ. ದಳಪತಿ ವಿಜಯ್ ಕೂಡ ರಾಜಕೀಯಕ್ಕೆ ಬರುವ ಮೊದಲು ಅಭಿಮಾನಿ ಸಂಘಗಳ ಮೂಲಕ ಸಮಾಜ ಸೇವೆ ನಡೆಸಿದ್ದರು ಎಂಬ ಹೋಲಿಕೆಗಳು ಕೇಳಿಬರುತ್ತಿವೆ.

ಇದೇ ವೇಳೆ ಧನುಷ್ ನಟಿಸಿರುವ ಇತ್ತೀಚಿನ ಹಲವು ಸಿನಿಮಾಗಳು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರ ಸಂದೇಶಗಳನ್ನು ಒಳಗೊಂಡಿರುವುದರಿಂದ, ಅವರ ಮುಂದಿನ ಹೆಜ್ಜೆ ರಾಜಕೀಯದತ್ತ ಇರಬಹುದೇ ಎಂಬ ಚರ್ಚೆ ಸಿನಿ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !