September 14, 2026
Monday, September 14, 2026
spot_img

Calorie Burn | ಆಫೀಸ್ ನಲ್ಲಿ ಕೆಲಸ ಮಾಡ್ತಾನೇ ಕ್ಯಾಲೊರಿ ಬರ್ನ್ ಮಾಡೋ ಟ್ರಿಕ್ಸ್ ತಿಳ್ಕೊಳಿ

ಆಫೀಸ್ ಕೆಲಸ ಅಂದ್ರೆ ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತುಕೊಳ್ಳೋದು ಸಾಮಾನ್ಯ. ಇದರಿಂದ ದೇಹದ ಚಲನೆ ಕಡಿಮೆ ಆಗಿ ತೂಕ ಹೆಚ್ಚಾಗೋ ಸಾಧ್ಯತೆ ಇರುತ್ತದೆ. ಆದರೆ ಕೆಲಸ ಬಿಟ್ಟು ಜಿಮ್‌ಗೆ ಹೋಗೋಕೆ ಸಮಯ ಇಲ್ಲ ಅಂದ್ರೆ ಬೇಸರ ಬೇಡ. ಕೆಲವು ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಆಫೀಸ್‌ನಲ್ಲೇ ಕ್ಯಾಲೊರಿ ಬರ್ನ್ ಮಾಡಬಹುದು.

ಲಿಫ್ಟ್ ಬದಲು ಮೆಟ್ಟಿಲು ಬಳಸಿ

ಚಿಕ್ಕದಾಗಿ ಕಾಣಿಸಿದ್ರೂ ಮೆಟ್ಟಿಲು ಹತ್ತೋದು ಉತ್ತಮ ಕಾರ್ಡಿಯೊ ವ್ಯಾಯಾಮ. ದಿನಕ್ಕೆ ಕೆಲವು ಬಾರಿ ಮೆಟ್ಟಿಲು ಬಳಸಿದ್ರೆ ದೇಹ ಹೆಚ್ಚು ಆಕ್ಟಿವ್ ಆಗಿರುತ್ತದೆ.

ಪ್ರತಿ ಗಂಟೆಗೆ ಎದ್ದು ನಡೆಯಿರಿ

ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತಿರೋದರಿಂದ ದೇಹ ಸುಸ್ತಾಗುತ್ತದೆ. ಪ್ರತಿ ಒಂದು ಗಂಟೆಗೆ 2–5 ನಿಮಿಷ ನಡೆದಾಡಿ. ಇದರಿಂದ ಕ್ಯಾಲೊರಿ ಬಳಕೆ ಸ್ವಲ್ಪ ಹೆಚ್ಚಾಗುತ್ತದೆ.

ಇದನ್ನೂ ಓದಿ:

ಫೋನ್ ಕಾಲ್ ವೇಳೆ ನಡೆಯಿರಿ

ಕಾಲ್ ಬಂದಾಗ ಕುಳಿತೇ ಮಾತನಾಡೋದಕ್ಕಿಂತ ನಿಧಾನವಾಗಿ ನಡೆದಾಡುತ್ತಾ ಮಾತನಾಡಿ. ದಿನದ ಸ್ಟೆಪ್ಸ್ ಸಹಜವಾಗಿಯೇ ಹೆಚ್ಚಾಗುತ್ತವೆ.

ಡೆಸ್ಕ್‌ನಲ್ಲಿ ಸಣ್ಣ ಸ್ಟ್ರೆಚಿಂಗ್ ಮಾಡಿ

ನೆಕ್ ರೋಲ್ಸ್, ಶೋಲ್ಡರ್ ಸ್ಟ್ರೆಚ್, ಕಾಲುಗಳ ಮೂವ್ಮೆಂಟ್ ಇವು ದೇಹವನ್ನು ಆಕ್ಟಿವ್ ಇಡುತ್ತವೆ.

ಹೆಚ್ಚು ನೀರು ಕುಡಿಯಿರಿ

ನೀರು ಕುಡಿಯೋದು ದೇಹಕ್ಕೆ ಒಳ್ಳೆಯದು, ಇದರ ಜೊತೆಗೆ ಎದ್ದು ಹೋಗಿ ಬಾಟಲ್ ತುಂಬಿಸೋವಾಗ ಚಲನೆಯೂ ಹೆಚ್ಚಾಗುತ್ತದೆ.

ಕ್ಯಾಲೊರಿ ಬರ್ನ್ ಅಂದ್ರೆ ಜಿಮ್ ಮಾತ್ರ ಅಲ್ಲ… ದಿನಪೂರ್ತಿ ದೇಹ ಚಲನೆಯಲ್ಲಿರೋದೇ ನಿಜವಾದ ಸೀಕ್ರೆಟ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !