HEALTH| ದಿನಕ್ಕೆ ಒಂದು ಹಿಡಿ ನೆನೆಸಿದ ಕಡಲೆಬೀಜ ಸೇವನೆಯು ಮಾರಣಾಂತಿಕ ಕಾಯಿಲೆಗಳನ್ನು ತಡೆಯಬಹುದೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾದಾಮಿ ಮಾತ್ರವಲ್ಲ ನೆನೆಸಿದ ಕಡಲೆಬೀಜವನ್ನು ಪ್ರತಿನಿತ್ಯ ತಿನ್ನುವುದರಿಂದ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ಕಡಲೆಕಾಯಿಯಲ್ಲಿ ವಿಟಮಿನ್ ಇ, ಸೆಲೆನಿಯಮ್, ಸತು ಮತ್ತು ಫೈಬರ್ ಸಮೃದ್ಧವಾಗಿದೆ. ಈ ಕಡಲೆಕಾಯಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಪೋಷಕಾಂಶಗಳು ಕಡಲೆಕಾಯಿಯಿಂದ ದೊರೆಯುತ್ತದೆ.

ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಆರೋಗ್ಯಕರವಾಗಿಸುತ್ತದೆ. ಇದರಲ್ಲಿರುವ ಪಾಲಿಫಿನಾಲ್‌ಗಳು ನಮ್ಮ ದೇಹದಲ್ಲಿ ಹೀರಲ್ಪಡುತ್ತವೆ ಮತ್ತು ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಚರ್ಮವನ್ನು ಹಗುರಗೊಳಿಸುತ್ತವೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಉರಿಯೂತ, ಊತ ಮತ್ತು ತುರಿಕೆ ಕಡಿಮೆ ಮಾಡುತ್ತದೆ. ರಾತ್ರಿಯಿಡೀ ನೆನಸಿದ ಕಡಲೆಬೀಜವನ್ನು ಸಿಪ್ಪೆ ತೆಗೆಯದೆ ಬೆಳಗಿನ ಉಪಾಹಾರಕ್ಕೆ ಸೇವಿಸುವುದರಿಂದ ಪ್ರೋಟೀನ್‌ಗಳು ದೊರೆಯುತ್ತವೆ. ಸ್ನಾಯು ಶಕ್ತಿಗಾಗಿ ಕಠಿಣ ವ್ಯಾಯಾಮ ಮಾಡುವವರು ನೆನೆಸಿದ ಕಡಲೆಯನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು.

ಕಡಲೆಕಾಯಿಯಲ್ಲಿ ರಿಬೋಫ್ಲಾವಿನ್, ಥಯಾಮಿನ್, ವಿಟಮಿನ್ ಬಿ ಮತ್ತು ಫಾಂಟೊಥೆನಿಕ್ ಆಮ್ಲಗಳಂತಹ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ಸಮೃದ್ಧವಾಗಿವೆ, ಇದು ಮೆದುಳನ್ನು ಸಕ್ರಿಯವಾಗಿ ಮತ್ತು ರಕ್ತ ಪರಿಚಲನೆ ಸುಗಮವಾಗಿರಿಸುತ್ತದೆ. ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ನೆನೆಸಿದ ಕಡಲೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!