ಎರಡು ಕಾರ್ ಬಾಂಬ್ ಸ್ಫೋಟಿಸಿದ ಉಗ್ರರು: ಒಂಭತ್ತು ಮಂದಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯ ಸೊಮಾಲಿಯಾದ ಮಹಾಸ್ ಪಟ್ಟಣ ಕಾರ್ ಬಾಂಬ್‌ ಸ್ಫೋಟದಿಂದ ತತ್ತರಿಸಿದೆ. ಸ್ಫೋಟಕಗಳನ್ನು ತುಂಬಿದ್ದ ವಾಹನಗಳೊಂದಿಗೆ ಉಗ್ರರು ದಾಳಿ ನಡೆಸಿದ್ದು, ಎರಡು ಕಾರ್ ಬಾಂಬ್ ಸ್ಫೋಟಗಳಲ್ಲಿ ಒಂಭತ್ತು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಜನನಿಬಿಡ ಪ್ರದೇಶವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಭದ್ರತಾ ಅಧಿಕಾರಿ ಅಬ್ದುಲ್ಲಾಹಿ ಅದಾನ್ ಹೇಳಿದ್ದಾರೆ. ಈ ದಾಳಿಯನ್ನು ಭಯೋತ್ಪಾದಕ ಸಂಘಟನೆ ಅಲ್-ಶಬಾಬ್‌ಗೆ ಸೇರಿದ ಜಿಹಾದಿ ಹೋರಾಟಗಾರರು ನಡೆಸಿದ್ದರು ಎಂದು ಹೇಳಲಾಗಿದೆ.

ಮಹಾಸ್ ಪೊಲೀಸ್ ಕಮಾಂಡರ್ ಉಸ್ಮಾನ್ ನೂರ್ ಮಾತನಾಡಿ, ಮಹಾಸ್‌ನಲ್ಲಿರುವ ಜಿಲ್ಲಾಡಳಿತ ಭವನದ ರೆಸ್ಟೋರೆಂಟ್ ಬಳಿ ಸ್ಫೋಟ ಸಂಭವಿಸಿದೆ. ಈ ದಾಳಿಯಲ್ಲಿ ಸತ್ತವರೆಲ್ಲರೂ ಅಮಾಯಕ ನಾಗರಿಕರು. ನಾಗರಿಕರನ್ನು ಹೆದರಿಸಲು ಭಯೋತ್ಪಾದಕರು ಸ್ಫೋಟ ನಡೆಸಿದ್ದಾರೆ, ಆದರೆ ಅಂತಹ ಘಟನೆಗಳಿಂದ ಜನರನ್ನು ಹೆದರಿಸಲು ಸಾಧ್ಯವಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!