VIRAL VIDEO| ಎದೆ ಝಲ್ಲೆನಿಸುವ ದೃಶ್ಯ: ನಿಯಂತ್ರಣ ಕಳೆದುಕೊಂಡು 2ಕಾರಿಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸ್ತೆ ಬದಿ ನಿಂತಿರುವ ಎರಡು ಕಾರುಗಳಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬಿಎಂಡಬ್ಲ್ಯೂ ಡಿಕ್ಕಿ ಹೊಡೆದಿರುವ ದೃಶ್ಯ ಭಯಾನಕವಾಗಿದೆ. ಫೇರ್‌ಫ್ಯಾಕ್ಸ್ ಕೌಂಟಿಯ ಪೊಲೀಸರು ವಿಡಿಯೋವನ್ನು ಹಂದಿಕೊಂಡು ಪೊಲೀಸ್ ಅಧಿಕಾರಿಯೊಬ್ಬರು ಕಾರೊಂದರ ಬಳಿ ನಿಂತು ಸಮಾಲೋಚನೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಎದುರಿಗೆ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಅಧಿಕಾರಿ ಪ್ರಾಣಾಪಾಯದಿಂದ ಬಚಾವ್‌ ಆಗಿದ್ದು ವಿಡಿಯೋದಲ್ಲಿ ಕಂಡು ಬರುತ್ತದೆ.

ಫೇರ್‌ಫ್ಯಾಕ್ಸ್ ಕೌಂಟಿ ಪಾರ್ಕ್‌ವೇಯಲ್ಲಿ ಉತ್ತರದ ಕಡೆಗೆ ಅತೀ ವೇಗದಲ್ಲಿ ಪ್ರಯಾಣಿಸುತ್ತಿದ್ದ ಕಪ್ಪು 2018 BMW M3 ನಿಯಂತ್ರಣವನ್ನು ಕಳೆದುಕೊಂಡು ನಿಂತಿದ್ದ ಎರಡು ಕಾರು ಹಾಗೂ ಅಧಿಕಾರಿಯ ಕಡೆಗೆ ನುಗ್ಗಿ ಬಂದಿದೆ. ಕಾರನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಎಂಬ ವಿಚಾರವನ್ನು ಕಂಡುಕೊಂಡ ಪೊಲೀಸರು ಮುಂದೆ ಚಿಕ್ಕ ಮಕ್ಕಳಿಗೆ ಕಾರು ಕೊಡದಂತೆ ತಾಕೀತು ಮಾಡಿದ್ದಾರೆ.

https://www.facebook.com/watch/?v=220776750652730

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!