September 10, 2026
Thursday, September 10, 2026
spot_img

ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಸ್ಥಳದಲ್ಲೇ ಪ್ರಾಣಬಿಟ್ಟ ತಾಯಿ-ಮಗಳು

ಹೊಸದಿಗಂತ ವರದಿ ತುಮಕೂರು :

ಮಗನನ್ನ ಶಾಲೆಗೆ ಸೇರಿಸಲು ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕಕ್ಕೆ ಉರುಳಿ ಬಿದ್ದ ಪರಿಣಾಮ ತಾಯಿ ಮಗಳು ತೀವ್ರ ಗಾಯ ಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಣಿಗಲ್ ತಾಲೋಕಿನ ಹೇರೂರು ಗ್ರಾಮದ ಹತ್ತಿರ ನಡೆದಿದೆ.

ಬೆಂಗಳೂರು ಬಿಡದಿ ಮೂಲದ ಜಯಮಾಲ (59) ತಾಯಿ ಮತ್ತು ರಾಜೇಶ್ವರಿ (40) ಮಗಳು ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ.

ಶಾಲೆಗೆ ಸೇರಿಸಲು ಹೋದಾಗ ಘಟನೆ

ರಾಜೇಶ್ವರಿಯವರು ತನ್ನ ತಾಯಿ ಜಯಮಾಲ ಮತ್ತು ಸಂಬಂಧಿಕರಾದ ಮಹಾವೀರ ನನ್ನ ಜೊತೆಯಲ್ಲಿ ಕರೆದುಕೊಂಡು ತನ್ನ ಮಗನಾದ ಪ್ರೀತಂ ನನ್ನ ವಿದ್ಯಾಭ್ಯಾಸಕ್ಕಾಗಿ ಶ್ರವಣ ಬೆಳಗೊಳದ ಮಠದ ಶಾಲೆಗೆ ಸೇರಿಸಲು ಸೋಮವಾರ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 75 ಹೇರೂರು ಗ್ರಾಮದ ಬಳಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಪರಿಣಾಮ ತಾಯಿ ಮಗಳು ಸಾವನ್ನಪ್ಪಿದ್ದರೆ ಮಗ ಪ್ರೀತಂ ಮತ್ತು ಸಂಬಂಧಿಕರಾದ ಮಹಾವೀರ್ ಆಶ್ಚರ್ಯಕ ರೀತಿಯಲ್ಲಿ ಬದುಕುಳಿದಿದ್ದಾರೆ.

ಇದನ್ನೂ ಓದಿ:

ಇನ್ಸ್‌ಪೆಕ್ಟರ್ ಮಾಧ್ಯಾನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !