ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಆರ್.ಆರ್.ನಗರ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚನೆ ಮಾಡಿದೆ.
ಎಸ್‌ಐಟಿ ತನಿಖಾ ತಂಡದ ಮುಖ್ಯಸ್ಥರನ್ನಾಗಿ ಬಿ.ಕೆ.ಸಿಂಗ್ ಅವರನ್ನು ನೇಮಕ ಮಾಡಿದೆ. ತಂಡದಲ್ಲಿ ಸದಸ್ಯರಾಗಿ ಕೇಂದ್ರ ವಲಯ ಪೋಲಿಸ್ ಮಹಾನಿರೀಕ್ಷಕ ಲಭೂರಾಮ್, ರೈಲ್ವೇಸ್ ಪೋಲಿಸ್ ಅಧೀಕ್ಷಕಿ ಸೌಮ್ಯಲತಾ ಹಾಗೂ ಪೋಲಿಸ್ ಅಧೀಕ್ಷಕ ಸೈಮನ್ ಅವರು ಇದ್ದಾರೆ.
ನಿನ್ನೆಯಷ್ಟೇ ಕಾಂಗ್ರೆಸ್ನ ಒಕ್ಕಲಿಗ ನಾಯಕರು ಎಸ್ಐಟಿ ರಚಿಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಈಗ ಎಸ್ಐಟಿ ರಚನೆ ಮಾಡಲಾಗಿದೆ.