Sunday, June 4, 2023

Latest Posts

ಭದ್ರತಾ ಲೋಪ ಪ್ರಕರಣ: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರೀಂ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಬೆಂಗಾವಲು ಭದ್ರತಾ ಲೋಪ ಪ್ರಕರಣದಲ್ಲಿ ಪ್ರಯಾಣದ ದಾಖಲೆಗಳನ್ನು ಮತ್ತು ತನಿಖಾ ಸಂಸ್ಥೆಗಳಿಗೆ ಸಿಕ್ಕ ಸಾಕ್ಷಿಗಳನ್ನು ಸುರಕ್ಷಿತವಾಗಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಹಿಮಾ ಕೋಹ್ಲಿ ಅವರ ಪೀಠವು ಭದ್ರತಾ ಲೋಪದ ಸಂಪೂರ್ಣ ದಾಖಲೆಯನ್ನು ಸೀಲ್ ಮಾಡುವ ಪ್ರಕ್ರಿಯೆಗೆ ಸಹಕರಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಂಜಾಬ್ ಪೊಲೀಸರಿಗೆ, ಎಸ್‌ಪಿಜಿ ಮತ್ತು ಇತರ ಏಜೆನ್ಸಿಗಳಿಗೆ ಸೂಚಿಸಿದೆ.

ಸೋಮವಾರದವರೆಗೆ ಕ್ರಮ ಕೈಗೊಳ್ಳದಂತೆ ಕೇಂದ್ರ ಮತ್ತು ಪಂಜಾಬ್ ಸರ್ಕಾರದ ಸಮಿತಿಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಜ.10 ರಂದು ನಡೆಯಲಿದೆ. ಲೋಪ, ನಿರ್ಲಕ್ಷ್ಯಕ್ಕೆ ಕಾರಣಗಳೇನು ಎಂದು ತನಿಖೆ ನಡೆಸಬೇಕಿದೆ ಪೀಠ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!