ಮಗುವಿನ ಬಗ್ಗೆ ಬೆಕ್ಕಿಗಿರುವ ಕಾಳಜಿ ನೋಡ್ರೀ!!: ಕ್ಯೂಟ್‌ ಕ್ಯೂಟ್‌ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುಟ್ಟ ಮಕ್ಕಳ ಬಗ್ಗೆ ಎಲ್ಲರಿಗೂ ಹೆಚ್ಚಿನ ಕಾಳಜಿ, ಅದರಲ್ಲೂ ಅಂಬೆಗಾಲಿಡುವ ಮಕ್ಕಳನ್ನು ಎಷ್ಟು ಕೇರ್‌ ಮಾಡಿದ್ರೂ ಸಾಲದು. ಪುಟ್ಟಪುಟ್ಟ ಹೆಜ್ಜೆ ಇಡುತ್ತಾ ಕೆಲವೊಮ್ಮೆ ಅನಾಹುತಗಳು ಸಂಭವಿಸುತ್ತವೆ. ಹಾಗಾಗಿಯೇ ಮಗು ಕಡೆ ಕುಟುಂಬಸ್ಥರ ಗಮನ ಸದಾ ಇದ್ದೇ ಇರುತ್ತದೆ. ಆದರೆ ಈ ವೈರಲ್‌ ವಿಡಿಯೋದಲ್ಲಿ ಮಗು ಕೇರ್‌ ಟೇಕರ್‌ ಆಗಿ ಬೆಕ್ಕು ಕೆಲಸ ಮಾಡ್ತಿದೆ.

ಬಾಲ್ಕನಿಯಲ್ಲಿರುವ ಮಗು ತನ್ನ ಪುಟ್ಟ ಕೈಗಳಿಂದ ಕಂಬಿ ಹಿಡಿಯುತ್ತಿದ್ದರೆ. ಎಲ್ಲಿ ಬೀಳುತ್ತೋ ಎಂಬ ಭಯದಿಂದ ಆ ಕೈಗಳನ್ನು ಕೆಳಗಿಳಿಸುತ್ತಿದೆ. ಮಗು ಬೆಕ್ಕಿನಿಂದ ದೂರ ಸರಿದರೂ ಬಿಡದೆ ಬಂದು ಮಗುವಿನ ರಕ್ಷಣೆಗ ನಿಂತಿದೆ. ಇದೀಗ ವೈರಲ್‌ ಆಗಿದ್ದು, ಮಗುವಿನ ಬಾಡಿಗಾರ್ಡ್‌ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಪ್ರೀತಿ, ಕಾಳಜಿ ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೆ ಆ ಕಾಳಜಿ ಹೆಚ್ಚಾಗಿರುತ್ತದೆ ಎಂಬುದು ಈ ವಿಡಿಯೋದಲ್ಲಿ ಸಾಬೀತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!