ಹಲ್ಲುಗಳು ಫಳಫಳ ಹೊಳೆಯಬೇಕೆಂದರೆ, ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಕ್ಕರೆ ಹಲ್ಲು ಫಳಫಳ ಹೊಳೆಯುವಂತಿರಬೇಕು. ಆದರೆ ಹಲ್ಲುಗಳ ಕಾಳಜಿ ಮಾಡದ ಕಾರಣ ಅನೇಕ ಜನರಲ್ಲಿ ಹಳದಿ ಹಲ್ಲನ್ನು ನಾವು ಕಾಣಬಹುದು. ಇದರ ನಿವಾರಣೆಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮತ್ತು ಕೆಲ ಸಲಹೆಗಳನ್ನು ಅನುಸರಿಸುವುದು ಉತ್ತಮ

  • ಕಾಫಿ, ಸೋಡಾ, ಮತ್ತು ಕೆಲವೊಮ್ಮೆ ಮೌತ್‌ವಾಶ್‌ಗಳು ನಿಮ್ಮ ಹಲ್ಲುಗಳು ಹಳದಿಯಾಗಲು ಕಾರಣವಾಗಬಹುದು. ಆದ್ದರಿಂದ ನಾವು ಅವರಿಂದ ದೂರವಿರಬೇಕು. ದಿನಕ್ಕೆ ಎರಡು ಬಾರಿಯಾದರೂ ಹಲ್ಲುಜ್ಜುವುದು ಅತ್ಯಗತ್ಯ. ಈ ರೀತಿ ಮಾಡುವುದರಿಂದ ಹಲ್ಲು ಮತ್ತು ನಾಲಿಗೆ ಮೇಲೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾ ದೂರವಾಗುತ್ತದೆ.
  • ಸಿಟ್ರಸ್ ಹಣ್ಣುಗಳು ನೈಸರ್ಗಿಕವಾಗಿ ಯಾವುದೇ ಕಲೆಗಳಿಲ್ಲದೆ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತವೆ. ವಿಟಮಿನ್ ಸಿ ಸಮೃದ್ಧವಾಗಿರುವ ಸ್ಟ್ರಾಬೆರಿ ಮತ್ತು ಕಿವಿ ನಿಮ್ಮ ಹಲ್ಲುಗಳನ್ನು ಬಲಪಡಿಸುತ್ತದೆ. ಸೇಬು ಮತ್ತು ಪೇರಲೆ ಹಣ್ಣು ತುಂಬಾ ಉಪಯುಕ್ತವಾಗಿವೆ.
  • ಚೀಸ್ ಮತ್ತು ಮೊಸರು ಡೈರಿ ಉತ್ಪನ್ನಗಳು ದಂತಕ್ಷಯವನ್ನು ಕಡಿಮೆ ಮಾಡುತ್ತದೆ. ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲ್ಲುಗಳ ಮೇಲೆ ಯಾವುದೇ ಕಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
  • ಬಣ್ಣದ ಪಾನೀಯ ಕುಡಿಯುವಾಗ, ಹಲ್ಲುಗಳ ಮೇಲೆ ಕಲೆಗಳನ್ನು ತಡೆಗಟ್ಟಲು ಸ್ಟ್ರಾವನ್ನು ಬಳಸಬೇಕು. ನಿಂಬೆ ಮತ್ತು ಉಪ್ಪಿನ ಮಿಶ್ರಣವನ್ನು ಬಳಸಿ ನಿಯಮಿತವಾಗಿ ಬ್ರಷ್ ಮಾಡಿ. ನಿಂಬೆ ನೈಸರ್ಗಿಕವಾಗಿ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ, ಈ ಸಿಟ್ರಿಕ್ ಆಮ್ಲಕ್ಕೆ ಉಪ್ಪು ಸೇರಿಸುವುದರಿಂದ ಇವೆರಡರ ಸಂಯೋಜನೆಯು ನೈಸರ್ಗಿಕವಾಗಿ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ.
  • ಹಸಿರ ತರಕಾರಿ ಗೆಡ್ಡೆಕೋಸು, ಕ್ಯಾರೆಟ್, ಕುಂಬಳಕಾಯಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಈ ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ನೈಸರ್ಗಿಕವಾಗಿ ಹಲ್ಲುಗಳಿಗೆ ಮಸಾಜ್ ಮಾಡುತ್ತದೆ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ.
  • ಎರಡು ತಿಂಗಳಿಗೊಮ್ಮೆ ಟೂತ್ ಬ್ರಶ್ ಬದಲಾಯಿಸಿ. ಒಂದು ನಿರ್ದಿಷ್ಟ ಅವಧಿಯ ನಂತರ ಹಲ್ಲುಜ್ಜುವ ಬ್ರಷ್‌ನ ಬಿರುಗೂದಲುಗಳು ತುಂಬಾ ಗಟ್ಟಿಯಾಗುತ್ತವೆ. ಇದು ಹಲ್ಲುಗಳ ಮೇಲಿನ ದಂತಕವಚವನ್ನು ಹಾನಿಗೊಳಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!