ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಕನ್ನಡಪರ ಸಂಘಟನೆಗಳು ಕೆಆರ್‌ಎಸ್ ಜಲಾಶಯ ಮುತ್ತಿಗೆ ಹಾಕಲಿವೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಶ್ರೀರಂಗಪಟ್ಟಣದ ಕೆಆರ್‌ಎಸ್ ಡ್ಯಾಂವರೆಗೂ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರ್ಯಾಲಿ ನಡೆಯಲಿದೆ. ತೆರೆದ ವಾಹನದಲ್ಲಿ ರ್ಯಾಲಿ ನಡೆಸಿ ಡ್ಯಾಂಗೆ ಮುತ್ತಿಗೆ ಹಾಕಲಿದ್ದಾರೆ.
ಬೆಳಗ್ಗೆ 11ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ರ್ಯಾಲಿ ಹೊರಡಲಿದೆ. ದಾರಿಯುದ್ದಕ್ಕೂ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, ರಾಮನಗರದ ಐಜೂರು ಗೇಟ್ ಬಳಿ ಪ್ರತಿಭಟನೆ ನಡೆಯಲಿದೆ. ಅಲ್ಲಿನ ರೈತರು ಕನ್ನಡಪರ ಹೋರಾಟಗಾರರ ರ್ಯಾಲಿಗೆ ಕೈ ಜೋಡಿಸಲಿದ್ದಾರೆ.
ದಾರಿಯುದ್ದಕ್ಕೂ ರ್ಯಾಲಿಗೆ ರೈತರು ಸ್ವಾಗತಿಸಿದ್ದು, ಮಂಡ್ಯ, ಮದ್ದೂರು, ಮೈಸೂರು, ಶ್ರೀರಂಗಪಟ್ಟಣ ರೈತರೂ ಕೂಡ ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.