Tuesday, July 5, 2022

Latest Posts

ಅಶೋಕ್‌ ಗೆಹ್ಲೋಟ್‌ ಸಹೋದರನ ಮನೆ ಮೇಲೆ ಸಿಬಿಐ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಜೋಧ್‌ಪುರ ನಿವಾಸದಲ್ಲಿ ಕೇಂದ್ರ ತನಿಖಾ ದಳ ದಾಳಿ ನಡೆಸಿದೆ. ಅಗ್ರಸೇನ್ ಗೆಹ್ಲೋಟ್ ರಸಗೊಬ್ಬರ ವ್ಯಾಪಾರಿಯಾಗಿದ್ದು, ರಸಗೊಬ್ಬರ ಹಗರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ನಡೆಸಲಾಗಿತ್ತು.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಗ್ರಸೇನ್ ಗೆಹ್ಲೋಟ್ 2007 ಮತ್ತು 2009 ರ ನಡುವೆ ಸಬ್ಸಿಡಿ ರಸಗೊಬ್ಬರವನ್ನು ರಫ್ತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೂಲಗಳ ಪ್ರಕಾರ, ಅಗ್ರಸೇನ್ ಗೆಹ್ಲೋಟ್ ಅವರು 2007 ರಿಂದ 2009 ರ ಅವಧಿಯಲ್ಲಿ ಸಬ್ಸಿಡಿ ದರದಲ್ಲಿ ಭಾರತೀಯ ರೈತರಿಗೆ ಮೀಸಲಾಗಿದ್ದ ಮ್ಯೂರಿಯೇಟ್ ಆಫ್ ಪೊಟ್ಯಾಶ್ (MoP) ಅನ್ನು ವಿದೇಶಗಳಿಗೆ ವಿದೇಶಗಳಿಗೆ ರಫ್ತು ಮಾಡಿದ್ದಾರೆ ಎನ್ನಲಾಗಿದೆ.

“ಎಂಒಪಿ ದೇಶದ ಬಡ ರೈತರಿಗೆ ಮೀಸಲಿರಿಸಲಾಗಿತ್ತು. ಅಗ್ರಸೇನ್ ಗೆಹ್ಲೋಟ್ ಅವರು ತಮ್ಮ ಕಂಪನಿ ಅನುಪಮ್ ಕೃಷಿ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಖರೀದಿಸಿದರು ಮತ್ತು ನಂತರ ಅದನ್ನು ಮಲೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರು” ಎಂದು 2020ರಲ್ಲಿ ಇಡಿ ಆರೋಪಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss