ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮುಂಬರುವ 10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಿಬಿಎಸ್ಇಗೆ ಜೋಡಿತವಾಗಿರುವ ಶಾಲೆಗಳಿಗೆ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ಗಳನ್ನು ಶಾಲೆಗಳಿಗೆ ಹೋಗಿಯೇ ಪಡೆದುಕೊಳ್ಳಬೇಕಾಗುತ್ತದೆ.
ಸಿಬಿಎಸ್‌ಇ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯು ಫೆಬ್ರವರಿ 15,2023 ರಿಂದ ದೇಶಾದ್ಯಂತ ಪ್ರಾರಂಭವಾಗುತ್ತದೆ. 10 ನೇ ತರಗತಿ ಪರೀಕ್ಷೆಗಳು ಮಾರ್ಚ್ 21 ರಂದು ಕೊನೆಗೊಳ್ಳಲಿದ್ದು, 12 ನೇ ತರಗತಿ ಪರೀಕ್ಷೆಗಳು ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿವೆ. 10 ಮತ್ತು 12ನೇ ತರಗತಿಯ ಪರೀಕ್ಷಾ ಸಮಯ ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ.
ಸಿಬಿಎಸ್‌ಇ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ? :
ಹಂತ 1 : ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡಿ
ಹಂತ 2 : ಮುಖ್ಯಪುಟದಲ್ಲಿ ನೀಡಲಾಗಿರುವ ಪ್ರವೇಶ ಪತ್ರ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 3 : ಅಭ್ಯರ್ಥಿಗಳು ನಿಮ್ಮ ರೋಲ್ ನಂಬರ್, ಜನ್ಮದಿನಾಂಕ ಇತ್ಯಾದಿ ವಿವರವನ್ನು ತುಂಬಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
ಹಂತ 4 : ಸ್ಕ್ರೀನ್ ಮೇಲೆ ಪ್ರವೇಶ ಪತ್ರ ಮೂಡುತ್ತದೆ. ಅದನ್ನು ಡೌನ್‌ಲೋಡ್ ಮಾಡಿ, ಪ್ರಿಂಟೌಟ್ ತೆಗೆದುಕೊಳ್ಳಿ.