DIABETES | ಸಿಕ್ಕಾಪಟ್ಟೆ ಹಸಿವಾಗೋದು ಟೈಪ್ 2 ಡಯಾಬಿಟಿಸ್‌ನ ಮೊದಲ ಲಕ್ಷಣ, ಇನ್ನಷ್ಟು ಸಿಂಪ್ಟಮ್ಸ್ ಇಲ್ಲಿದೆ ನೋಡಿ..

ರಕ್ತನಾಳಗಳಲ್ಲಿ ಹೆಚ್ಚು ಸಕ್ಕರೆ ಇರುವವರಿಗೆ ಟೈಪ್ 2 ಡಯಾಬಿಟಿಸ್ ಬಾಧಿಸುತ್ತದೆ, ಸೂಕ್ತ ಕ್ರಮ ಹಾಗೂ ಚಿಕಿತ್ಸೆಯಿಂದ ಮೊದಲ ಹಂತದಲ್ಲಿ ಇದನ್ನು ನಿವಾರಿಸಬಹುದು, ಜೀವಿತಾವಧಿಯವರೆಗೂ ಇರುವ ಸಮಸ್ಯೆ ಇದಾಗಿದ್ದು, ಯಾವೆಲ್ಲಾ ಲಕ್ಷಣಗಳಿವೆ ನೋಡಿ..

  • ಪದೇ ಪದೆ ಬಾಯಾರಿಕೆ ಆಗ್ತಾ ಇದೆ, ಎಷ್ಟು ನೀರು ಕುಡಿದರೂ ಸಮಾಧಾನವೇ ಆಗ್ತಾ ಇಲ್ಲ ಎಂದರೆ ಒಮ್ಮೆ ಶುಗರ್ ಟೆಸ್ಟ್ ಮಾಡಿಸಿ.
  • ಯಾವಾಗಲೂ ಯೂರಿನ್‌ಗೆ ಹೋಗಬೇಕು ಎನಿಸೋದು, ರಾತ್ರಿ ಇದು ಹೆಚ್ಚಾಗಿ ಸರಿಯಾದ ನಿದ್ರೆ ಆಗದಿರುವುದು.
  • ಎಷ್ಟು ತಿಂದರೂ ಸಮಾಧಾನವೇ ಇಲ್ಲ, ಹಸಿವು ಇಂಗುತ್ತಿಲ್ಲ, ಈಗಿನ್ನ ತಿಂದಿದ್ದರೂ ಮತ್ತೆ ಹಸಿವು ಎಂದರೆ ಇದು ಯೋಚಿಸಬೇಕಾದ ವಿಷಯವೇ.
  • ತೂಕ ಇಳಿಸೋಕೆ ಡಯಟ್, ವ್ಯಾಯಾಮ ಮಾಡದೇ ಇದ್ದರೂ ತೂಕ ಇಳಿಕೆ ಆಗೋದು.
  • ಯಾವಾಗಲೂ ಸುಸ್ತು ಒಳ್ಳೆ ನಿದ್ದೆ ಮಾಡಿ ಎದ್ದರೂ ಬೆಳಗ್ಗೆ ಫ್ರೆಶ್ ಅನಿಸೋದಿಲ್ಲ, ಕೂರೋಣ ಎನಿಸುವಷ್ಟು ಸುಸ್ತು.
  • ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸೋದಿಲ್ಲ, ಬ್ಲರ್ ಆಗಿ ಕಾಣಿಸ್ತಾ ಇದೆ ಎಂದರೆ ವೈದ್ಯರ ಬಳಿ ತೋರಿಸಿ.
  • ಚಾಕುವಿನಿಂದ ಆದ ಪುಟ್ಟ ಗಾಯ, ಶೇವಿಂಗ್ ಮಾಡುವಾಗ ಆದ ಸಣ್ಣ ಗೀಟು, ಬಿದ್ದಾಗ ಆದ ಗಾಯ ಯಾವುದೂ ಬೇಗ ವಾಸಿಯಾಗೋದೆ ಇಲ್ಲ.
  • ಯಾವಾಗಲೂ ಏನಾದ್ರೂ ಒಂದು ರೀತಿಯ ಇನ್ಫೆಕ್ಷನ್ ಕಾಡುತ್ತಲೇ ಇರುತ್ತದೆ.

    ಈ ಎಲ್ಲ ಲಕ್ಷಣಗಳು ಬೇರೆ ಸಮಸ್ಯೆಯದ್ದೂ ಆಗಿರಬಹುದು, ಇವೆಲ್ಲವನ್ನು ಇಂಟರ್ನೆಟ್ ಆಧರಿಸಿ ಬರೆಯಲಾಗಿದೆ.ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!