ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಟ್ರಾಫಿಕ್ ಸಮಸ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಹೀಗೆ ಹಲವು ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಕೆಲವರು ಬೈಕ್ ಮತ್ತು ಮೆಟ್ರೋ ಬಳಸುತ್ತಿದ್ದಾರೆ. ಈಗ ಕೆಲ ಸೆಲೆಬ್ರಿಟಿಗಳು ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ.
ಇತ್ತೀಚಿಗೆ ಸಾರಾ ಅಲಿ ಖಾನ್, ಹೇಮಾ ಮಾಲಿನಿ, ನವಾಜುದ್ದೀನ್… ಹೀಗೆ ಕೆಲವು ಸೆಲೆಬ್ರಿಟಿಗಳು ಮುಂಬೈ ಟ್ರಾಫಿಕ್ ತಪ್ಪಿಸಲು ಮೆಟ್ರೋ ಹತ್ತಿದರು. ಈಗ ಕೆಲವರು ಬೈಕ್ ನಲ್ಲಿ ಹೋಗುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಶೂಟಿಂಗ್ ಗೆ ಹೋಗುತ್ತಿದ್ದಾಗ ಮುಂಬೈನ ಮಧ್ಯೆ ಟ್ರಾಫಿಕ್ ನಿಂದಾಗಿ ಕಾರಿನಿಂದ ಇಳಿದು ಶೂಟಿಂಗ್ ಗೆ ತೆರಳಲು ಬೈಕ್ ಸವಾರನಿಗೆ ಲಿಫ್ಟ್ ಕೇಳಿದ್ದರು. ಇದರಿಂದಾಗಿ ಈ ಫೋಟೋ ವೈರಲ್ ಆಗಿದ್ದು, ಅಮಿತಾಬ್ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಬೈಕ್ ಸವಾರನಿಗೆ ಲಿಫ್ಟ್ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.
ಇದೀಗ ಅಮಿತಾಬ್ ಹಾದಿಯಲ್ಲೇ ನಾಯಕಿ ಅನುಷ್ಕಾ ಶರ್ಮಾ ಕೂಡ ಶೂಟಿಂಗ್ ಗೆ ಬೈಕ್ ನಲ್ಲಿ ತೆರಳಿದ್ದಾರೆ. ಮುಂಬೈನಲ್ಲಿ ಟ್ರಾಫಿಕ್ ಜಾಸ್ತಿ ಇದ್ದ ಕಾರಣ ಅನುಷ್ಕಾ ಶರ್ಮಾ ತಮ್ಮ ಅಂಗರಕ್ಷಕನೊಂದಿಗೆ ಬೈಕ್ ನಲ್ಲಿ ಶೂಟಿಂಗ್ ಗೆ ತೆರಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಲ್ಮೆಟ್ ಧರಿಸದೇ ಇರುವುದರಿಂದ ಹೆಲ್ಮೆಟ್ ಧರಿಸಿ ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಸೆಲೆಬ್ರಿಟಿಗಳಿಗೆ ನಿಯಮಗಳಿವೆಯೋ ಇಲ್ಲವೋ ಎಂದು ಪೋಸ್ಟ್ ಮಾಡುತ್ತಿದ್ದಾರೆ.
https://www.instagram.com/reel/CsQp622teqf/?utm_source=ig_web_copy_link