ರಾಷ್ಟ್ರೀಯ ಡೆಂಗ್ಯೂ ದಿನ: ರೋಗದ ಲಕ್ಷಣ, ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳು ಇಲ್ಲಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡೆಂಗ್ಯೂ ರೋಗದಿಂದ ಆಗುವ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡೆಂಗ್ಯೂ ದಿನವನ್ನು ಜಾರಿಗೆ ತರಲಾಗಿದ್ದು, ಪ್ರತಿ ವರ್ಷವೂ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಡೆಂಗ್ಯೂ ದಿನವು ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಯೋಜನೆಯಾಗಿದ್ದು, ರೋಗ, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಇಲ್ಲಿ ತಿಳಿಯೋಣ.

ಡೆಂಗ್ಯೂ ಈಡೀಸ್‌ ಈಜಿಪ್ಟಿ ಎಂಬ ಸೊಳ್ಳೆಯ ಮೂಲಕ ಹರಡುತ್ತದೆ. ಡೆಂಗ್ಯೂ ಸೋಂಕಿತ ನಾಲ್ಕು ಜನರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ.

ಸೊಳ್ಳೆ ಕಚ್ಚಿದ 3-14 ದಿನಗಳ ಒಳಗೆ ಡೆಂಗ್ಯೂ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಮೊದಲಿಗೆ ತೀವ್ರ ಜ್ಞರದೊಂದಿಗೆ ಆರಂಭಗೊಳ್ಳುವ ಸಮಸ್ಯೆ ನಂತರ ಬೇರೆ ಬೇರೆ ಲಕ್ಷಣಗಳಿಂದ ರೋಗ ಉಲ್ಬಣಗೊಳ್ಳುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ ಹೆಚ್ಚು.

ಡೆಂಗ್ಯೂ ರೋಗದ ಲಕ್ಷಣಗಳೇನು?

-ದೇಹದ ದದ್ದುಗಳು

-ಹೆಚ್ಚಿನ ಜ್ವರ

-ತೀವ್ರ ತಲೆನೋವು

-ಕಣ್ಣುಗಳ ಹಿಂದೆ ನೋವು

-ವಾಂತಿ ಮತ್ತು ವಾಕರಿಕೆಯ ಭಾವನೆ

-ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು

ಮುನ್ನೆಚ್ಚರಿಕಾ ಕ್ರಮಗಳು:

ಕೂಲರ್​ಗಳು ಮತ್ತು ಇತರ ಸಣ್ಣ ಕಂಟೇನರ್ ಗಳಿಂದ (ಪ್ಲಾಸ್ಟಿಕ್ ಕಂಟೇನರ್ ಗಳು, ಬಕೆಟ್ ಗಳು, ಬಳಸಿದ ಆಟೋಮೊಬೈಲ್ ಟೈರ್​ಗಳು, ವಾಟರ್ ಕೂಲರ್ ಗಳು, ಪೆಟ್ ವಾಟರ್ ಕಂಟೇನರ್ ಗಳು ಮತ್ತು ಹೂವಿನ ಹೂದಾನಿಗಳು) ನೀರನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಬೇಕು.

-ನೀರು ಶೇಖರಣಾ ಪಾತ್ರೆಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು.

-ಸೊಳ್ಳೆಗಳ ಕಡಿತವನ್ನು ತಡೆಯಲು ಹಗಲಿನಲ್ಲಿ ಏರೋಸಾಲ್ ಬಳಸಿ.

-ಮಳೆಗಾಲದಲ್ಲಿ ಜನರು ತಮ್ಮ ಕೈಕಾಲುಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸಬೇಕು.

-ಮಲಗುವಾಗ ಸೊಳ್ಳೆ ಪರದೆಗಳು ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಬಹುದು.

ಡೆಂಗ್ಯೂ ರೋಗಕ್ಕೆ ಚಿಕಿತ್ಸೆಗಳು:

ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ಜನರು ವಿಶ್ರಾಂತಿ ಪಡೆಯುವುದು ಮೊದಲ ಆದ್ಯತೆ ಆಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಜ್ಯೂಸ್ ಕುಡಿಯಬೇಕು. ಜ್ವರ ಮತ್ತು ದೇಹದ ನೋವಿಗೆ ಮಾತ್ರೆ ತೆಗೆದುಕೊಳ್ಳಬಹುದು. ಆದಾಗ್ಯೂ, ರೋಗಲಕ್ಷಣಗಳು ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!