ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ಆರ್‌ಆರ್‌ಆರ್’ ಖ್ಯಾತಿಯ ನಟ ರಾಮ್ಚರಣ್ ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಚಾರವನ್ನು ಅವರ ಪತ್ನಿ ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ಚರಣ್ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟರಲ್ಲಿ ಒಬ್ಬರು. ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಇವರು ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸದ ವಿಚಾರವನ್ನು ಹಂಚಿಕೊಳ್ಳಲು ಅವರ ಪತ್ನಿ ಉಪಾಸನಾ ಕಾಮಿನೇನಿ ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು.
ರಾಮ್ಚರಣ್ ಅವರ ಈವರೆಗಿನ ಸಿನಿಮಾಗಳ ಕೆಲವು ನೋಟಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ. ಅದಕ್ಕೆ ‘Sweet sixteen’ ಎಂದು ಕ್ಯಾಪ್ಶನ್ ನೀಡಿದ್ದಾರೆ.
2007ರಲ್ಲಿ ‘ಚಿರುತಾ’ ಚಿತ್ರದ ಮೂಲಕ ತಮ್ಮ ಬಣ್ಣದ ಲೋಕಕ್ಕೆ ಕಾಲಿಟ್ಟ ಸ್ಟಾರ್ ನಟ ರಾಮ್ಚರಣ್ ನಂತರ ಮಗಧೀರ, ರಂಗಸ್ಥಳಂ, ಆರ್‌ಆರ್‌ಆರ್ ನಂತಹ ಹಲವಾರು ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದ್ರೆ, ಈ ಮೂರು ಚಿತ್ರಗಳಲ್ಲಿ ಅವರು ನಟಿಸಿರುವ ಪಾತ್ರಗಳು ಮಾತ್ರ ವೃತ್ತಿಜೀವನದ ಅತ್ಯುತ್ತಮ ಆಯ್ಕೆ ಎಂದೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.