ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಮರ್ಧಾಳ ಸಮೀಪದ ಸುಳ್ಯ ಎಂಬಲ್ಲಿ ಆ.28 ರ ಗುರುವಾರ ರಾತ್ರಿ ಸ೦ಭವಿಸಿದೆ.
ಕಾಡಾನೆಯಿಂದ ದಾಳಿಗೊಳಗಾಗಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ನೇಲ್ಯಡ್ಕ ನಿವಾಸಿ ಚೋಮ(65) ಎಂದು ಗುರುತಿಸಲಾಗಿದೆ.
ಚೋಮ ಅವರು ಮರ್ಧಾಳದಿಂದ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳ ಸುಳ್ಯ ಸಮೀಪ ಏಕಾಏಕಿ ಪ್ರತ್ಯಕ್ಷಗೊ೦ಡ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಗ೦ಭೀರ ಗಾಯಗೊಂಡ ಚೋಮರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.