ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಮನೆಯಲ್ಲಿ ಸಂಭ್ರಮ: ಹೆಣ್ಣು ಮಗುವನ್ನು ಸ್ವಾಗತಿಸಿದ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಮುಖ್ಯಮಂತ್ರಿ, ಭಗವಂತ್ ಸಿಂಗ್ ಮಾನ್ ಮತ್ತು ಅವರ ಎರಡನೇ ಪತ್ನಿ ಗುರುಪ್ರೀತ್ ಕೌರ್ (35 ವರ್ಷ) ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪಂಜಾಬ್ ಇತಿಹಾಸದಲ್ಲಿ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ತಂದೆಯಾದ ಮೊದಲ ಸಿಎಂ ಭಗವಂತ್ ಮಾನ್ ಎಂಬುದು ಉಲ್ಲೇಖಾರ್ಹ.

‘ದೇವರು ಉಡುಗೊರೆಯಾಗಿ ಮಗಳನ್ನು ಕೊಟ್ಟಿದ್ದಾನೆ.. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು ಮನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೌರ್ ಅವರನ್ನು ಬುಧವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಪಂಜಾಬ್ ಮುಖ್ಯಮಂತ್ರಿ ಗುರುವಾರ ಬೆಳಿಗ್ಗೆ ಅಲ್ಲಿಗೆ ಆಗಮಿಸಿದರು.

2015ರಲ್ಲಿ ಭಗವಂತ್ ಮಾನ್ ತನ್ನ ಮೊದಲ ಪತ್ನಿ ಇಂದರ್‌ಪ್ರೀತ್ ಕೌರ್‌ನಿಂದ ವಿಚ್ಛೇದನದ ನಂತರ ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದ್ದರು. ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ತಿಂಗಳ ನಂತರ 2022ರಲ್ಲಿ ಅವರ ಎರಡನೇ ವಿವಾಹವಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!