ನಟಿ ಕಂಗನಾ ವಿರುದ್ಧ ಪೋಸ್ಟ್: ಕಾಂಗ್ರೆಸ್ ನಾಯಕಿ ಸುಪ್ರಿಯಾಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಜೆಪಿಯಿಂದ ಟಿಕೆಟ್ ಘೋಷಣೆಯಗುತ್ತಿದ್ದಂತೆ ಕಾಂಗ್ರೆಸ್ ನಟಿ ವಿರುದ್ಧ ಮುಗಿಬಿದ್ದಿತ್ತು.ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ವಿವಾದಾತ್ಮಕ ಪೋಸ್ಟ್ ಭಾರಿ ಕೋಲಾಹಲ ಎಬ್ಬಿಸಿತ್ತು.

ಇದೀಗ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯಿಂದ ಸುಪ್ರಿಯಾ ಶ್ರೀನಾಟೆ ಕೈಬಿಟ್ಟಿದೆ. ಕಾಂಗ್ರೆಸ್ ಪ್ರಕಟಗೊಳಿಸದ 8ನೇ ಪಟ್ಟಿಯಲ್ಲಿ ಸುಪ್ರಿಯಾ ಶ್ರೀನಾಟೆ ಕಳೆದ ಬಾರಿ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಕ್ಷೇತ್ರವನ್ನು ವಿರೇಂದ್ರ ಚೌಧರಿಗೆ ನೀಡಲಾಗಿದೆ.

ನಟಿ ಕಂಗನಾ ವಿರುದ್ಧ ಕೀಳುಮಟ್ಟದ ಪೋಸ್ಟ್ ಹಾಕಿದ್ದ ಸುಪ್ರಿಯಾ ಶ್ರೀನಾಟೆ ಬಳಿಕ ತನ್ನ ಸಾಮಾಜಿಕ ಜಾಲತಾಣ ತಂಡದ ಯಾರೋ ಒಬ್ಬರು ಈ ಪೋಸ್ಟ್ ಹಾಕಿದ್ದಾರೆ. ನನ್ನ ಗಮನಕ್ಕೆ ಬಂದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಲಾಗಿದೆ. ತಂಡದಲ್ಲಿ ಹಲವರು ಇರುವ ಕಾರಣ ಈ ಪೋಸ್ಟ್ ಯಾರು ಮಾಡಿದ್ದಾರೆ ಎಂದು ಪರಿಶೀಲಿಸುತ್ತಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರಿನಲ್ಲಿ ಕೆಲ ನಕಲಿ ಖಾತೆಗಳನ್ನು ತೆರೆದು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಕುರಿತು ದೂರು ನೀಡಲಾಗಿದೆ ಎಂದು ಸುಪ್ರಿಯಾ ಶ್ರೀನಾಟೆ ಹೇಳಿದ್ದರು.

ಆದರೆ ಸುಪ್ರಿಯಾ ಶ್ರೀನಾಟೆ ಸ್ಪಷ್ಟನೆಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ.ಇತ್ತ ಚುನಾವಣಾ ಆಯೋಗ ಕೂಡ ಸುಪ್ರಿಯಾ ಶ್ರೀನಾಟೆಗೆ ನೋಟಿಸ್ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ 8ನೇ ಪಟ್ಟಿ ಬಿಡುಗೆಡೆ ಮಾಡಿದೆ. 14 ಅಭ್ಯರ್ಥಿಗಳ ಈ ಪಟ್ಟಿಯಲ್ಲಿ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸುಪ್ರಿಯಾ ಶ್ರೀನಾಟೆ ಬದಲು ವಿರೇಂದ್ರ ಚೌಧರಿಯನ್ನು ಕಣಕ್ಕಿಳಿಸಲಾಗಿದೆ.

2019ರಲ್ಲಿ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಪ್ರಿಯಾ ಶ್ರೀನಾಟೆ ಸೋಲು ಕಂಡಿದ್ದರು. ಬಿಜೆಪಿಯ ಪಂಕಜ್ ಚೌಧರಿ ವಿರುದ್ದ ಸೋಲು ಕಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!