Tuesday, March 21, 2023

Latest Posts

ಕೆಮ್ಮಿನ ಸಿರಪ್ ತಯಾರಿಕಾ ಕಂಪನಿ ಮರಿಯನ್ ಬಯೋಟೆಕ್ ಪರವಾನಗಿ ರದ್ದುಗೊಳಿಸಲು ಕೇಂದ್ರ ಸರಕಾರ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಮ್ಮಿನ ಸಿರಪ್ ತಯಾರಿಕಾ ಕಂಪನಿ ಮರಿಯನ್ ಬಯೋಟೆಕ್ (Marion biotech) ಪರವಾನಗಿ ರದ್ದುಗೊಳಿಸುವಂತೆ ಉತ್ತರ ಪ್ರದೇಶ ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.

ಕಂಪನಿಯಿಂದ ಪರೀಕ್ಷೆಗಾಗಿ ಪಡೆಯಲಾದ 36 ಮಾದರಿಗಳ ಪೈಕಿ 22ರಲ್ಲಿ ಎಥಿಲೀನ್ ಗ್ಲೈಕೋಲ್ (Ethylene glycol) ಕಲಬೆರಕೆಯಾಗಿರುವುದು ಕಂಡುಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಗೌತಮ ಬುದ್ಧ ನಗರದ ಡ್ರಗ್ ಇನ್​ಸ್ಪೆಕ್ಟರ್ ತಿಳಿಸಿದ್ದಾರೆ.

ಉಜ್ಬೇಕಿಸ್ತಾನದಲ್ಲಿ (Uzbekistan) ಕೆಮ್ಮಿನ ಔಷಧಿ ಸೇವಿಸಿ 18 ಮಕ್ಕಳು ಪ್ರಾಣ ಕಳೆದುಕೊಂಡ ದಾರುಣ ಘಟನೆಜನವರಿಯಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ, ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ ಉಜ್ಬೇಕಿಸ್ತಾನಕ್ಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿತ್ತು.

ಮೆರಿಯನ್ ಬಯೋಟೆಕ್‌ನಿಂದ ತಯಾರಿಸಲ್ಪಟ್ಟ ಉತ್ಪನ್ನಗಳು ಗುಣಮಟ್ಟದ ಮಾನದಂಡಗಳು ಅಥವಾ ವಿಶೇಷಣಗಳನ್ನು ಪೂರೈಸಲು ವಿಫಲವಾಗಿವೆ. ಹೀಗಾಗಿ ಅವುಗಳನ್ನು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿ ರದ್ದುಗೊಳಿಸಿದ ಬೆನ್ನಲ್ಲೇ ಮೆರಿಯನ್ ಬಯೋಟೆಕ್‌ ಪರವಾನಗಿ ರದ್ದತಿ ನಿರ್ಧಾರವೂ ಪ್ರಕಟವಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!