ಮಹಿಳಾ ಪ್ರಿಮಿಯರ್ ಲೀಗ್ | ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಮುಂಬೈ ಇಂಡಿಯನ್ಸ್: ಗುಜರಾತ್‌ಗೆ 208 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ವಿರುದ್ಧ ವಿಕೆಟ್ 5 ನಷ್ಟಕ್ಕೆ 207 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಯಾಸ್ತಿಕ ಭಾಟಿಯಾ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಗುಜರಾತ್‌ನ ತನುಜಾ ಕನ್ವರ್ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ವಿಕೆಟ್ ಪಡೆದ ಸಾಧನೆ ಮಾಡಿದರು. 15 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೀಲೆ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸ್ಕಿವಿಯರ್ ಬ್ರಂಟ್ ಜೊತೆಯಾಟ ನೆರವಾಯಿತು.

ನ್ಯಾಟ್ ಸ್ಕಿವಿಯರ್ ಬ್ರಂಟ್ 18 ಎಸೆತದಲ್ಲಿ 23 ರನ್ ಸಿಡಿಸಿ ನಿರ್ಗಮಿಸಿದರು. ಹೀಲೆ ಮ್ಯಾಥ್ಯೂಸ್ 31 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 47 ರನ್ ಸಿಡಿಸಿ ಔಟಾದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ ಅಬ್ಬರ ಆರಂಭಗೊಂಡಿತು. ಕೌರ್ ಕೇವಲ 30 ಎಸೆತದಲ್ಲಿ 14 ಬೌಂಡರಿ ಮೂಲಕ 65 ರನ್ ಸಿಡಿಸಿದರು.

ಕೌರ್ ಬಳಿಕ ಅಮೆಲಿಯಾ ಕೇರ್ ಹಾಗೂ ಪೂಜಾ ವಸ್ತ್ರಾಕರ್ ಜೊತೆಯಾಟ ನೆರವಾಯಿತು. ಪೂಜಾ 15 ರನ್ ಸಿಡಿಸಿ ಔಟಾದರು. ಅಮೆಲಿಯಾ ಕೇರ್ ಅಜೇಯ 45 ರನ್ ಸಿಡಿಸಿದರು. ಇಸ್ಸಿ ವೊಂಗ್ ಸಿಕ್ಸರ್ ಮೂಲಕ 6 ರನ್ ಸಿಡಿಸಿದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 5 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!