ಎಕ್ಸ್ ಪ್ರೆಸ್ ವೇ ಗಳಲ್ಲಿ ವೇಗದ ಮಿತಿ ಜಾರಿಗೆ ಕೇಂದ್ರ ಸರಕಾರ ಚಿಂತನೆ: ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಎಕ್ಸ್ ಪ್ರೆಸ್ ವೇ ಮತ್ತು ಹೆದ್ದಾರಿಗಳು (Expressway Highway Speed Limit) ಒಂದೆಡೆ ಅಭಿವೃದ್ಧಿಗೊಳ್ಳುತ್ತಿದ್ದರೆ, ಇತ್ತ ದೇಶದಲ್ಲಿ ವಾಹನಗಳ ವೇಗದ ಮಿತಿಯು ಹೆಚ್ಚುತ್ತಿದೆ.

ಈ ಹಿನ್ನೆಲೆ ವೇಗದ ಮಿತಿಯನ್ನ ಬದಲಾಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಹೊಸ ಎಕ್ಸ್ ಪ್ರೆಸ್ ವೇ ಗಳು ಮತ್ತು ಹೆದ್ದಾರಿಗಳು ಹೆಚ್ಚಿನ ವೇಗಕ್ಕೆ ಸಿದ್ಧವಾಗಿವೆ. ಅದ್ರಂತೆ,ವೇಗದ ಮಿತಿಯನ್ನ ಬದಲಾಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ನಿತಿನ್ ಗಡ್ಕರಿ ಬಹಿರಂಗಪಡಿಸಿದರು.

ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೇಶವನ್ನ ಉತ್ತಮಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ. ಹಳೆಯ ನಿಯಮಗಳಿಂದಾಗಿ ಹೆದ್ದಾರಿಗಳಲ್ಲಿ ವೇಗದ ಮಿತಿ ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದ ಸಚಿವರು, ವೇಗ ಮಿತಿ ನಿಯಮಗಳನ್ನ ಬದಲಾಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ವೇಗದ ಮಿತಿಯನ್ನು ನಿಗದಿಪಡಿಸುವುದು ರಸ್ತೆ ಮತ್ತು ಸಾರಿಗೆಯ ಜವಾಬ್ದಾರಿಯಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯಗಳ ಜಂಟಿಯಾಗಿ ಶೀಘ್ರವೇ ಮಾತುಕತೆ ನಡೆಸಲಿದೆ ಎಂದರು.

ಕೇಂದ್ರ ಸಾರಿಗೆ ಸಚಿವಾಲಯವು ಶೀಘ್ರವೇ ರಾಜ್ಯ ಸಾರಿಗೆ ಸಚಿವರನ್ನ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲಿದೆ. ಅದರ ನಂತರ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೆದ್ದಾರಿ 8 ಲೇನ್, 6 ಲೇನ್, 4 ಲೇನ್ ಮತ್ತು 2 ಲೇನ್ ಆಧಾರದ ಮೇಲೆ ವಾಹನಗಳ ವೇಗವನ್ನ ನಿರ್ಧರಿಸಲಾಗುತ್ತದೆ ಎಂದು ಹೇಳಿದರು. ಇದರೊಂದಿಗೆ, ವಾಹನಗಳ ಪ್ರಕಾರ, ನಗರಗಳನ್ನು ಗಣನೆಗೆ ತೆಗೆದುಕೊಂಡು ವೇಗದ ಮಿತಿಯನ್ನ ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!