August 26, 2026
Wednesday, August 26, 2026
spot_img

ಸಿಜೆಪಿ ಜೊತೆ ಮಾತುಕತೆಗೆ ಕೇಂದ್ರ ಸಿದ್ಧ: ಸಚಿವ ಜಿತೇಂದ್ರ ಸಿಂಗ್ ನೀಡಿದ 4ನೇ ಆಹ್ವಾನದಲ್ಲೇನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಕ್ರೋಚ್ ಜನತಾ ಪಾರ್ಟಿಯ (CJP) ಮುಖಂಡರನ್ನು ಮಾತುಕತೆಗೆ ಕರೆಯಲು ಕೇಂದ್ರ ಸರ್ಕಾರ ಮತ್ತೆ ಮುಂದಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಸಮಸ್ಯೆಯ ಬಗೆಹರಿಕೆಗೆ ಸರ್ಕಾರ ಈಗಾಗಲೇ ನಾಲ್ಕು ಅಧಿಕೃತ ಆಹ್ವಾನ ಪತ್ರಗಳನ್ನು ಕಳುಹಿಸಿದೆ ಎಂದಿದ್ದಾರೆ. ನೆನ್ನೆಯ ಮಧ್ಯಾಹ್ನದಿಂದಲೇ ಸಿಜೆಪಿ ಪ್ರತಿನಿಧಿಗಳನ್ನು ಸಂಪರ್ಕಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ.

ಸಮಯ ಮತ್ತು ಸ್ಥಳದ ಆಯ್ಕೆ ವಿದ್ಯಾರ್ಥಿಗಳಿಗೇ ಮುಕ್ತ

ವಿದ್ಯಾರ್ಥಿ ಸಂಘಟನೆಯ ಅನುಕೂಲಕ್ಕೆ ತಕ್ಕಂತೆ ಎಲ್ಲಾ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಲು ಆಡಳಿತ ಪಕ್ಷ ಸಿದ್ಧವಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಅಧಿಕೃತ ಕಚೇರಿ ಅಥವಾ ನಿವಾಸದಲ್ಲಿ ಸಭೆ ಆಯೋಜಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಸಮಯ ಮತ್ತು ಸ್ಥಳವನ್ನು ವಿದ್ಯಾರ್ಥಿಗಳೇ ನಿರ್ಧರಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯವೇ ಸರ್ಕಾರದ ಆದ್ಯತೆ

“ನಾವು ಯಾವುದೇ ವೈಯಕ್ತಿಕ ಪ್ರತಿಷ್ಠೆಗೆ ಬಿದ್ದಿಲ್ಲ. ನಾನಾಗಲಿ ಅಥವಾ ಸಚಿವ ಜೆ.ಪಿ. ನಡ್ಡಾ ಅವರಾಗಲಿ ನೇರವಾಗಿ ಚರ್ಚೆಯಲ್ಲಿ ಭಾಗವಹಿಸುತ್ತೇವೆ. ಸಂಸದೀಯ ಮಾದರಿಯ ಸೌಹಾರ್ದಯುತ ಮಾತುಕತೆಯಿಂದ ಮಾತ್ರ ಪ್ರತಿಯೊಂದು ಸಮಸ್ಯೆಗೆ ಸೂಕ್ತ ಪರಿಹಾರ ಸಾಧ್ಯ. ಯುವಜನರ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಯೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ” ಎಂದು ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !