Thursday, September 29, 2022

Latest Posts

ಚಹಲ್‌ ದಾಂಪತ್ಯದ ಗಾಳಿಸುದ್ದಿಗೆ ಗರಂ ಆದ ಹಿಟ್ ಮ್ಯಾನ್: ಪತ್ರಕರ್ತ ಮೇಲೆ ಚಾಟಿ ಬೀಸಿದ ರೋಹಿತ್ ಶರ್ಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಆಟಗಾರರನ್ನು ಡಿಫೆಂಡ್‌ ಮಾಡಿಕೊಳ್ಳುವುದನ್ನು ನೋಡುತ್ತಲೇ ಬಂದಿದ್ದೇವೆ. ಅದು ವಿರಾಟ್ ಕೊಹ್ಲಿಯ ವಿಚಾರವೇ ಇರಲಿ ಅಥವಾ ಉಳಿದ ಯುವ ಆಟಗಾರರ ವಿಚಾರವೇ ಇರಲಿ, ರೋಹಿತ್ ಶರ್ಮಾ ಯಾವಾಗಲೂ ತಮ್ಮ ತಂಡದ ಆಟಗಾರರ ಬೆಂಬಲಕ್ಕೆ ನಿಲ್ಲುತ್ತಲೇ ಬಂದಿದ್ದಾರೆ.

ಇದೀಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ದಾಂಪತ್ಯ ಜೀವನದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ್ದ ಗಾಳಿ ಸುದ್ದಿ ಕುರಿತಂತೆ ಪತ್ರಕರ್ತ ಮೇಲೆ ಚಾಟಿ ಬೀಸಿದ್ದಾರೆ.

ಏಷ್ಯಾಕಪ್ ಟೂರ್ನಿಯನ್ನಾಡಲು ಟೀಂ ಇಂಡಿಯಾ, ಯುಎಇಗೆ ಬಂದಿಳಿದ್ದು, ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್‌ ಆಟಗಾರರು ನೆಟ್ಸ್‌ನಲ್ಲಿ ಭರ್ಜರಿ ತಯಾರಿ ನಡೆಸುವ ಮೂಲಕ ಬೆವರು ಹರಿಸುತ್ತಿದ್ದಾರೆ. ಈ ಸಂದರ್ಭ ನಾಯಕ ರೋಹಿತ್ ಶರ್ಮಾ ಹಾಗೂ ಲೆಗ್ ಸ್ಪಿನ್ನರ್‌ ಯುಜುವೇಂದ್ರ ಚಹಲ್,ಪತ್ರಕರ್ತರ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.

ಅಭ್ಯಾಸ ನಡೆಸಿದ ಬಳಿಕ ರೋಹಿತ್ ಶರ್ಮಾ, ಯುಜುವೇಂದ್ರ ಚಹಲ್ ತಮಾಷೆಯಾಗಿ ಕಾಲ ಕಳೆಯುವ ಸಂದರ್ಭದಲ್ಲಿ ಅಲ್ಲೇ ಮೈದಾನದ ಸ್ಟ್ಯಾಂಡ್‌ನಲ್ಲಿ ನಿಂತಿದ್ದ ಪತ್ರಕರ್ತರನ್ನು ಉದ್ದೇಶಿಸಿ, ಜೋರಾಗಿಯೇ ಯುಜುವೇಂದ್ರ ಚಹಲ್ ದಾಂಪತ್ಯ ಜೀವನದ ಕುರಿತಂತೆ ಗಾಳಿ ಹಬ್ಬಿಸಿದ್ದು ಯಾರು ಅಂತ ಹೇಳಿ. ಇನ್ನು ಅವನ ಮೇಲೆ ವಾತಾವರಣ ಕೂಡಾ ಸರಿಯಿಲ್ಲ ಎಂದು ಕಥೆ ಬರೆಯಿರಿ ಎಂದು ಪತ್ರಕರ್ತರ ಕಾಲೆಳೆದಿದ್ದಾರೆ.

ಇದಕ್ಕೆ ಸಾಥ್ ನೀಡಿದ ಯುಜುವೇಂದ್ರ ಚಹಲ್, ಇದೊಂಥರ ಅಂತ್ಯಾಕ್ಷರಿ ಆಟ ನಡೆಯುತ್ತಿದೆ. ನಾವಿಲ್ಲಿ ಅಂತ್ಯಾಕ್ಷರಿ ಆಡಲು ಬಂದಿಲ್ಲ ಎಂದು ಪತ್ರಕರ್ತರ ಮೇಲೆ ಯುಜಿ ಅಸಮಾಧಾನ ಹೊರಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!