Sunday, October 2, 2022

Latest Posts

‌IND vs PAK | ಏಷ್ಯಾಕಪ್‌ ಟೂರ್ನಿಯ ನೇರ ಪ್ರಸಾರ, ಪಂದ್ಯದ ಸಮಯ, ಕ್ರೀಡಾಂಗಣ ಕುರಿತಾದ ಮಾಹಿತಿ ಇಲ್ಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ ಏಷ್ಯಾ ಕಪ್ ನ 15ನೇ ಆವೃತ್ತಿಗೆ ಯುಎಇನಲ್ಲಿ ಇಂದಿನಿಂದ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವು ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ನಾಳೆ ಭಾನುವಾರ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕಾದಾಟಕ್ಕೆ ಸಿದ್ಧವಾಗಿದೆ. ಪ್ರಪಂಚದಾದ್ಯಂತ ಕ್ರಿಕೆಟ್‌ ಪ್ರೇಮಿಗಳು ಈ ಪಂದ್ಯವನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಈ ಟೂರ್ನಿಯ ನೇರ ಪ್ರಸಾರ ಕುರಿತಾದ ಮಾಹಿತಿ ಈ ಕೆಳಗಿನಂತಿದೆ.
ಭಾರತ vs ಪಾಕಿಸ್ತಾನ ಏಷ್ಯಾ ಕಪ್ 2022 ಪಂದ್ಯವು ಆ.28ರಂದು ರಾತ್ರಿ 7:30ಕ್ಕೆ ನಡೆಯಲಿದೆ. 7 ಗಂಟೆಗೆ ಉಭಯ ತಂಡಗಳ ನಾಯಕರು ಟಾಸ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಪಂದ್ಯವನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಏಷ್ಯಾ ಕಪ್ ಸಂಫೂರ್ಣ ಟೂರ್ನಿಯನ್ನು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ HD ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತ vs ಪಾಕಿಸ್ತಾನ ಏಷ್ಯಾ ಕಪ್ 2022 ಅನ್ನು ಡಿಸ್ನಿ+ಹಾಟ್‌ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ನಲ್ಲಿ ನೋಡಬಹುದು. ಈ ಮೂಲಕ ಹಾಟ್‌ ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!