ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಚಂದನ್-ನಿವೇದಿತಾ ಜೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಭಿಮಾನಿಗಳಿಗೆ ವರ್ಷದ ಆರಂಭದಲ್ಲಿ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಬಗ್ಗೆ ವಿಶೇಷ ವಿಡಿಯೋ ಮೂಲಕ ಅವರು ಸುಳಿವು ನೀಡಿದ್ದಾರೆ.

ವೀಡಿಯೋದಲ್ಲಿ Fat+Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಕೇಳಿದ್ದಾರೆ. ಅದಕ್ಕೆ ಉತ್ತರ ಫಾದರ್ ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಕಮೆಂಟ್‌ಗಳ ಮೂಲಕ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಬಿಗ್‌ ಬಾಸ್‌ ಶೋನಲ್ಲಿ ಪರಿಚಯವಾದ ಈ ಜೋಡಿ, 2020ರಲ್ಲಿ ಹಸೆಮಣೆ ಏರಿದ್ದರು. ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!