April 29, 2026
Wednesday, April 29, 2026
spot_img

ಚಂದ್ರಗ್ರಹಣ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಸಂಜೆ ನೆರವೇರಿದ ರಾತ್ರಿ ಮಹಾಪೂಜೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆದಿತ್ಯವಾರ ಚಂದ್ರಗ್ರಹಣ ನಿಮಿತ್ತ ಶ್ರೀ ದೇವರ ರಾತ್ರಿಯ ಮಹಾಪೂಜೆ ಸಂಜೆ 5 ಗಂಟೆಗೆ ನೆರವೇರಿತು.ಆ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ ಇರಲಿಲ್ಲ.

ಶ್ರೀ ದೇವಳದಲ್ಲಿ ಭಾನುವಾರ ನಿತ್ಯದ ಸೇವೆ ಮತ್ತು ದರುಶನ ಹಾಗೂ ಭಕ್ತಾದಿಗಳ ಸೇವಾ ಸಮಯಗಳಲ್ಲಿ ವ್ಯತ್ಯಯ ಮಾಡಲಾಯಿತು.ಮದ್ಯಾಹ್ನ 11 ಗಂಟೆಗೆ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ನಡೆಯಿತು.

ಭಾನುವಾರ ರಾತ್ರಿ ಭೋಜನ ಪ್ರಸಾದ ಇರಲಿಲ್ಲ.ಅಲ್ಲದೆ ಸಾಯಂಕಾಲದ ಆಶ್ಲೇಷ ಬಲಿ ಸೇವೆಗೆ ಇರಲಿಲ್ಲ.

ಸರ್ಪಸಂಸ್ಕಾರ ಆರಂಭ ಇಲ್ಲ:
ಸರ್ಪಸಂಸ್ಕಾರ ಸೇವೆ ಆರಂಭ ಇರಲಿಲ್ಲ. ಶನಿವಾರ ಆರಂಭಗೊಂಡ ಸೇವೆಯು ಭಾನುವಾರ ಕೊನೆಗೊಳಿಸಿ ಭಕ್ತರು ಸರ್ಪಸಂಸ್ಕಾರ ಸಮಾಪ್ತಿಯಾಯಿತು.ಆದರೆ ಭಾನುವಾರ ಸೇವಾರಂಭ ಇರಲಿಲ್ಲ. ಸೋಮವಾರ ಎಂದಿನಂತೆ ಆರಂಭವಾಗಲಿದೆ. ಸೋಮವಾರ ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !