ಗುಡ್‌ ನ್ಯೂಸ್‌ ನೀಡಿದ ಚಂದ್ರಯಾನ್-‌೨: ಚಂದ್ರನ ಡಾರ್ಕ್‌ ಸೈಡ್‌ ಅಧ್ಯಯನಕ್ಕೆ ಸಹಾಯ ಮಾಡಲಿದೆ ಈ ಸಂಶೋಧನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದು ಕಡೆ ಇಸ್ರೋದ ಸಣ್ಣ ಉಪಗ್ರಹ ಉಡಾವಣಾ ವಾಹನವು ಎರಡು ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವಲ್ಲಿ ವಿಫಲವಾದರೆ ಇನ್ನೊದೆಡೆ ಇಸ್ರೋದ ಮತ್ತೊಂದು ಮಿಷನ್‌ ಸದ್ದಿಲ್ಲದೇ ಒಳ್ಳೆಯ ಸುದ್ದಿ ನೀಡಿದೆ. ಚಂದ್ರನ ಅಯಾನುಗೋಳದಲ್ಲಿ ಪ್ಲಾಸ್ಮಾ ಸಾಂದ್ರತೆ ಇದೆ ಎಂಬ ವಿಷಯವನ್ನು ಚಂದ್ರಯಾನ-2 ಕಂಡುಹಿಡಿದಿದೆ.

ಚಂದ್ರನ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿರುವ ಬಾಹ್ಯಾಕಾಶ ನೌಕೆಯು ಚಂದ್ರನ ಅಯಾನುಗೋಳವು ಪ್ರಕ್ಷುಬ್ಧ ಪ್ರದೇಶದಲ್ಲಿ(ವೇಕ್‌ ರೀಜನ್‌) ಪ್ಲಾಸ್ಮಾ ಸಾಂದ್ರತೆಯನ್ನು ಹೊಂದಿದೆ ಎಂಬುದನ್ನು ಕಂಡುಹಿಡಿದಿದೆ. ಚಂದ್ರನ ಜಾಗೃತ ಪ್ರದೇಶದಲ್ಲಿ ಗಮನಿಸಿದ ಈ ಪ್ಲಾಸ್ಮಾ ಸಾಂದ್ರತೆಯು ಚಂದ್ರನ ಡಾರ್ಕ್ ಸೈಡ್ ಪ್ಲಾಸ್ಮಾ ಪರಿಸರವನ್ನು ಅರ್ಥಮಾಡಿಕೊಳ್ಳುವಲ್ಲಿ ಹೊಸ ಆಯಾಮಗಳನ್ನು ತೆರೆದಿಡಲಿದೆ. ಈ ಪ್ರಕ್ಷುಬ್ಧ ಪ್ರದೇಶದಲ್ಲಿ ಸೌರ ವಿಕಿರಣ ಅಥವಾ ಸೌರ ಮಾರುತವು ಲಭ್ಯವಿರುವ ತಟಸ್ಥ ಕಣಗಳೊಂದಿಗೆ ನೇರವಾಗಿ ಸಂವಹನ ನಡೆಸುವುದಿಲ್ಲ ಆದರೂ ಅಲ್ಲಿ ಪ್ಲಾಸ್ಮಾ ಉತ್ಪತ್ತಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಸಂಶೋಧನೆಯನ್ನು ಚಂದ್ರಯಾನ-2ದ ಬಾಹ್ಯಾಕಾಶ ನೌಕೆ ಕಂಡುಹಿಡಿದಿದ್ದು 2019ರಲ್ಲಿ ಚಂದ್ರನ ಕಕ್ಷೆ ಸೇರಿರುವ ಅದು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುತ್ತಿದೆ. ಡ್ಯುಯಲ್ ಫ್ರೀಕ್ವೆನ್ಸಿ ರೇಡಿಯೊ ಸೈನ್ಸ್ (DFRS) ಅನ್ನು ಬಳಸಿ ಅಧ್ಯಯನ ಮಾಡಲಾಗುತ್ತಿದ್ದು ಈ ಉಪಕರಣವು S-ಬ್ಯಾಂಡ್ (2240 ​​MHz) ಮತ್ತು X-ಬ್ಯಾಂಡ್ (8496 MHz) ರೇಡಿಯೋ ತರಂಗಾಂತರಗಳಲ್ಲಿ ಎರಡು ಸುಸಂಬದ್ಧ ಸಂಕೇತಗಳನ್ನು ಬಳಸುತ್ತದೆ, ಚಂದ್ರನ ಪ್ಲಾಸ್ಮಾ ವಾತಾವರಣವನ್ನು ಅನ್ವೇಷಿಸಿದ ತರಂಗಾಂತರಗಳು ಚಂದ್ರಯಾನ-2 ಆರ್ಬಿಟರ್‌ನಿಂದ ಪ್ರಸಾರವಾಗಿದ್ದು ಬೆಂಗಳೂರಿನ ಬೈಲಾಲುನಲ್ಲಿರುವ ಗ್ರೌಂಡ್ ಸ್ಟೇಷನ್‌ನಲ್ಲಿ ಅವುಗಳನ್ನು ಸ್ವೀಕರಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!