Wednesday, October 5, 2022

Latest Posts

ಅಮೀರ್‌ ಖಾನ್‌ ನಟನೆಯ ಲಾಲ್‌ ಸಿಂಗ್ ಚಡ್ಡಾ ನಿಷೇಧಿಸುವಂತೆ ಅಂಕೋಲಾದಲ್ಲಿ ಪ್ರತಿಭಟನೆ

ಹೊಸದಿಗಂತ ವರದಿ ಅಂಕೋಲಾ:
ನಟ ಅಮೀರಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಲನಚಿತ್ರ ನಿಷೇಧಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಭಜರಂಗದಳದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ಧಾರರಿಗೆ ಮನವಿ ಸಲ್ಲಿಸಲಾಯಿತು.
ನಟ ಅಮೀರ್ ಖಾನ್ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಅಮೀರ್ ಖಾನ್ ಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.

ಅಮೀರ್ ಖಾನ್ ತಮ್ಮ ಲಾಲ್ ಸಿಂಗ್ ಚಡ್ಜಾ ಚಲನಚಿತ್ರ ಹಿಂದುಗಳು ನೋಡದಿದ್ದರೂ ಪರವಾಗಿಲ್ಲ ಬಾಕ್ಸ್ ಆಫೀಸ್ ನಲ್ಲಿ ಗೆಲುವು ಸಾಧಿಸಲಿದೆ ಎಂದು ದುರಹಂಕಾರದ ಹೇಳಿಕೆಗಳನ್ನು ನೀಡಿ ಹಿಂದೂಗಳಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಅಂಕೋಲಾದ ಚಿತ್ರ ಮಂದಿರದಲ್ಲಿ ಅಮೀರ್ ಖಾನ್ ನಟನೆಯ ಯಾವುದೇ ಚಲನಚಿತ್ರ ಪ್ರದರ್ಶನ ಮಾಡಿದಲ್ಲಿ ಭಜರಂಗದಳದಿಂದ ವಿರೋಧ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಿಂದುಗಳು ಅಮೀರ್ ಖಾನ್ ನಟಿಸಿರುವ ಚಲನಚಿತ್ರಗಳನ್ನು ನೋಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಭಜರಂಗದಳ ಸಂಚಾಲಕ ಕಿರಣ ನಾಯ್ಕ, ಪ್ರಮುಖರುಗಳಾದ ಸುಂದರ ಖಾರ್ವಿ, ಧೀರಜ ಖಾರ್ವಿ, ವಿನೋದ ಭಟ್ಟ, ಸಂತೋಷ ನಾರ್ವೇಕರ್, ನಿತ್ಯಾ ನಾಯ್ಕ, ಮಂಗೇಶ ನಾಯ್ಕ, ಆದಿತ್ಯ ನಾಯ್ಕ, ರಂಜಿತ್ ಗಾಂವಕರ್ ಮೊದಲಾದವರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!