ಡೆಲ್ಲಿ ವಿರುದ್ಧ ಗೆದ್ದ ಚೆನ್ನೈ: ಪ್ಲೇ ಆಫ್ ಗೆ ಲಗ್ಗೆ ಇಟ್ಟ ಧೋನಿ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈ ಸೂಪರ್​ ಕಿಂಗ್ಸ್​ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 77 ರನ್​ಗಳ ಗೆಲುವು ಸಾಧಿಸಿದೆ.ಈ ಮೂಲಕ ಪ್ಲೇ ಆಫ್​ ಪ್ರವೇಶಿಸಿತು.
ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಋತುರಾಜ್​ ಗಾಯಕ್ವಾಡ್(79)​ ಮತ್ತು ಡೆವೋನ್​ ಕಾನ್ವೆ(87) ಅವರ ಸೊಗಸಾದ ಅರ್ಧಶತಕದ ನೆರವಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 223 ರನ್​ ಗಳಿಸಿತು.

ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತನ್ನ ಪಾಲಿನ ಆಟದಲ್ಲಿ 9 ವಿಕೆಟ್​ ಕಳೆದುಕೊಂಡು 146 ರನ್​ ಗಳಿಸಲಷ್ಟೇ ಶಕ್ತವಾಯಿತು.

ಬ್ಯಾಟರ್‌ಗಳೆಲ್ಲ ಸಾಲು ಸಾಲಾಗಿ ಕೈಕೊಟ್ಟಾಗ ಕಪ್ತಾನನ ಆಟದ ಮೂಲಕ ಅರ್ಧ ಶತಕ ಬಾರಿಸಿದ ಡೇವಿಡ್​ ವಾರ್ನರ್​ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಆದರೆ ಇವರಿಗೆ ಯಾವುದೇ ಹಂತದಲ್ಲಿಯೂ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗದೇ ಹೋದ ಕಾರಣದಿಂದ ತಂಡ ಸೋಲು ಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!