August 19, 2026
Wednesday, August 19, 2026
spot_img

ಪತಿಯ ರಾಜಕೀಯ ಏಳಿಗೆಗಾಗಿ ಒಡವೆಗಳನ್ನೇ ಅಡವಿಟ್ಟಿದ್ದ ಚೆನ್ನಮ್ಮ ಇನ್ನು ನೆನಪು ಮಾತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ (85) ಅವರ ನಿಧನದ ಬೆನ್ನಲ್ಲೇ, ದೊಡ್ಡಗೌಡರ ಕಠಿಣ ರಾಜಕೀಯ ದಿನಗಳಲ್ಲಿ ಅವರು ನೀಡಿದ ಅದ್ಭುತ ತ್ಯಾಗದ ಕಥೆಗಳು ಮರುಕಳಿಸುತ್ತಿವೆ. ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದ ಚೆನ್ನಮ್ಮ, ದೇವೇಗೌಡರನ್ನು ದೇಶದ ಅತ್ಯುನ್ನತ ‘ಪ್ರಧಾನಿ’ ಹುದ್ದೆಯವರೆಗೆ ಬೆಳೆಸುವಲ್ಲಿ ತಮ್ಮ ಇಡೀ ಜೀವನವನ್ನೇ ಸವೆಸಿದ್ದರು.

ಆರಂಭಿಕ ದಿನಗಳ ಕಷ್ಟ

ಹೆಚ್.ಡಿ. ದೇವೇಗೌಡರು ಆರಂಭದಲ್ಲಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಬಳಿ ಹಣವಿರಲಿಲ್ಲ. ಆ ಕಠಿಣ ಪರಿಸ್ಥಿತಿಯಲ್ಲಿ ಪತಿಯ ರಾಜಕೀಯ ಭವಿಷ್ಯಕ್ಕಾಗಿ ಚೆನ್ನಮ್ಮ ತಮ್ಮ ಮದುವೆಯ ಮತ್ತು ಮೈಮೇಲಿದ್ದ ಆಭರಣಗಳನ್ನು ಯಾರಿಗೂ ತಿಳಿಸದೆ ಮಾರಿ ಚುನಾವಣಾ ಖರ್ಚಿಗೆ ಹಣ ಒದಗಿಸಿದ್ದರು.

ಇದನ್ನೂ ಓದಿ:

ಸ್ವಂತ ಹಸುಗಳ ಮಾರಿ ನೆರವು:

ಒಡವೆ ಮಾತ್ರವಲ್ಲದೆ, ತವರು ಮನೆಯಿಂದ ತಂದಿದ್ದ ನೆಚ್ಚಿನ ಹಸುಗಳನ್ನು ಮಾರಿ ಪತಿಯ ಚುನಾವಣಾ ಪ್ರಚಾರಕ್ಕೆ ಆರ್ಥಿಕ ಶಕ್ತಿಯಾಗಿ ನಿಂತಿದ್ದ ಮಹಾತಾಯಿ ಇನ್ನು ನೆನಪು ಮಾತ್ರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !