ಛತ್ರಪತಿ ಶಿವಾಜಿ ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ :

ಛತ್ರಪತಿ ಶಿವಾಜಿ ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಹೇಳಿದರು.

ಭಾನುವಾರ ಅವರು ಶಿಗ್ಗಾಂವ್ ಪಟ್ಟಣದಲ್ಲಿ ಆಯೋಜಿಸಿದ್ದ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕೆಲವರು ಬದುಕಿದ್ದಾಗ ಬಹಳ ಪ್ರಭಾವಬಿಗಳಾಗಿರುತ್ತಾರೆ. ಸಾವಿನ ನಂತರವೂ ಪ್ರಬಲ ಶಕ್ತಿ ಜನಪ್ರಿಯತೆ ಹೊಂದಿರುವವರು ವಿರಳ. ಅಂಥವರನ್ನು ನಾವು ಯುಗಪುರುಷರೆಂದು ಎನ್ನುತ್ತೇವೆ. ಅಂತಹವರಲ್ಲಿ ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದರು, ಸುಭಾಷ್ ಚಂದ್ರ ಬೋಸ್ ರಂತಹವರು ಇದ್ದಾರೆ ಎಂದರು.
ಸಂಸ್ಕೃತಿ ಮರುಸ್ಥಾಪನೆ
ಭಾರತ ದೇಶವನ್ನು ಪರಕೀಯರ ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ಪ್ರಬಲ ತಡೆ ಒಡ್ಡಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಮರುಸ್ಥಾಪಿಸಿದವರು ಛತ್ರಪತಿ ಶಿವಾಜಿ ಮಹಾರಾಜರು. ಮೊಘಲರ ಆಡಳಿತದ ದಿನಗಳ ಸಂದರ್ಭದಲ್ಲಿ ದಕ್ಷಿಣ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತೈಮೂರ್ ಷಡ್ಯಂತರಕ್ಕೆ ಅನೇಕ ರಾಜ್ಯಗಳು ವಶವಾಗಿದ್ದವು. ಬಾಲ್ಯದಲ್ಲಿನೇ ತಾಯಿ ಜೀಜಾಬಾಯಿ ಅವರು ನೀಡಿದ ರಾಮಾಯಣ, ಮಹಾಭಾರತದ ಪಾಠ ಹಾಗೂ ಗುರು ಕೊಂಡೋಜಿ ಅವರ ಶಸ್ತ್ರ ವಿದ್ಯೆಯಿಂದ ಧೈರ್ಯ, ಸೌರ್ಯ, ಆತ್ಮಬಲವನ್ನು ಜೋಡಿಸಿ ಶಿವಾಜಿ ಮಹಾರಾಜರು ಗೇರಿಲ್ಲಾ ಯುದ್ಧ ಕಲೆಯಿಂದ ವಿವಿಧ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು ಎದರು.
ಹಿಂದೂ ಸಮಾಜದ ಮೇಲೆ ನಡೆದ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು. ಅವರು ಚರಿತ್ರೆ ಮಾತ್ರ ಬದಲಾಯಿಸಲಿಲ್ಲ. ಹೊಸ ಚರಿತ್ರೆಯನ್ನು ರಚಿಸಿದರು. ಚಾರಿತ್ರ್ಯವಂತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಅವರು ಪ್ರಜೆಗಳನ್ನು ಸುಭಿಕ್ಷವಾಗಿಟ್ಟಿದ್ದರು. ಅಪ್ರತಿಮ ದೇಶಭಕ್ತನ, ಜೀವನಚರಿತ್ರೆಯನ್ನು ಸ್ಮರಿಸಬೇಕು. ಶಿವಾಜಿಯವರ ಕುಲಕ್ಕೆ ಸೇರಿದ ಕ್ಷತ್ರಿಯರು ಅವರ ಜಯಂತಿ ಆಚರಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಶ್ರೇಯೋಭಿವೃದ್ಧಿ
ತಾಲ್ಲೂಕಿನಲ್ಲಿ ಈ ಸಮಾಜ ಅತ್ಯಂತ ಗೌರವಯುವವಾಗಿ ಬದುಕು ನಡೆಸಿ, ಎಲ್ಲಾ ವರ್ಗದವರ ಪ್ರೀತಿಯನ್ನು ಗಳಿಸಿಕೊಂಡು, ಮುಖ್ಯವಾಹಿನಿಯಲ್ಲಿ ಸೇರಿಕೊಂಡು ತಾಲ್ಲೂಕಿನ ಶ್ರೇಯೋಭಿವೃದ್ಧಿಗೆ ನಿರಂತವಾಗಿ ಕೈಜೋಡಿಸಿರುವುದು ಶ್ಲಾಘನೀಯ. ಈ ಸಂಬಂಧ ಬಹಳ ಮುಖ್ಯ. ಇವ ನಮ್ಮವ ಎಂಬ ಧ್ಯೇಯ ಇಟ್ಟುಕೊಂಡಿದ್ದಾರೆ. ಮರಾಠಾ ಅಭಿವೃದ್ಧಿ ನಿಗಮದಿಂದ ರೂಪಿಸಿರುವ ಕಾರ್ಯಕ್ರಮಗಳು ತಾಲ್ಲೂಕಿನ ಫಲಾನುಭವಿಗಳಿಗೆ ಮುಕ್ತವಾಗಿ ಮುಟ್ಟಬೇಕು. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!