ಆಸ್ಟ್ರೇಲಿಯಾ ವಿರುದ್ಧ ಕೊನೆಯ 2 ಟೆಸ್ಟ್‌, ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಎರಡು ಟೆಸ್ಟ್​ ಮತ್ತು ಏಕದಿನ ಸರಣಿಗೆ ಟೀಮ್​ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ.
ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಮುಂದಿನ 2 ಪಂದ್ಯಗಳಿಗೆ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಮೊದಲೆರಡು ಪಂದ್ಯಗಳನ್ನು ಆಡಿದ ತಂಡವನ್ನೇ ಮುಂದುವರಿಸಿದೆ.

ಇನ್ನು ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್​ ಶರ್ಮಾ ಗೈರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್​ ಪಾಂಡ್ಯ ತಂಡದ ನಾಯಕತ್ವ ವಹಿಸಲಿದ್ದಾರೆ.ಆದ್ರೆ ದ್ವಿತೀಯ ಏಕದಿನ ಪಂದ್ಯದ ವೇಳೆ ರೋಹಿತ್​ ತಂಡಕ್ಕೆ ಮರಳಿ ಮತ್ತೆ ನಾಯಕತ್ವ ವಹಿಸಲಿದ್ದಾರೆ.

ಇತ್ತ ಪ್ರಸಕ್ತ ಸಾಲಿನ ರಣಜಿ ವಿಜೇತ ಸೌರಾಷ್ಟ್ರ ತಂಡದ ನಾಯಕ ಜೈದೇವ್​ ಉನಾದ್ಕತ್​ ಕೂಡ ಅಚ್ಚರಿ ಏಕ ದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐದು ತಿಂಗಳ ಬಳಿಕ ಟೆಸ್ಟ್‌ ತಂಡಕ್ಕೆ ವಾಪಸಾಗಿದ್ದ ಆಲ್ರೌಂಡರ್‌ ರವೀಂದ್ರ ಜಡೇಜಾ, ಏಕದಿನ ತಂಡಕ್ಕೂ ವಾಪಸಾಗಿದ್ದಾರೆ. ಇನ್ನೊಂದೆಡೆ ಜಸ್‌ಪ್ರೀತ್‌ ಬುಮ್ರಾ ಬೆನ್ನುನೋವಿನ ಕಾರಣಕ್ಕೆ ತಂಡದಿಂದ ಹೊರಬಿದ್ದಾರೆ.

ಆಸೀಸ್​ ವಿರುದ್ಧದ ಮುಂದಿನ ಎರಡು ಟೆಸ್ಟ್​ ಪಂದ್ಯಕ್ಕೆ ಭಾರತ ತಂಡ

ಭಾರತ: ರೋಹಿತ್​ ಶರ್ಮಾ(ನಾಯಕ), ಚೇತೇಶ್ವರ ಪೂಜಾರ, ವಿರಾಟ್​ ಕೊಹ್ಲಿ, ಕೆ.ಎಲ್​. ರಾಹುಲ್, ಸೂರ್ಯಕುಮಾರ್​ ಯಾದವ್, ಶ್ರೇಯಸ್​ ಅಯ್ಯರ್​, ಅಕ್ಷರ್​ ಪಟೇಲ್​, ಕೆ.ಎಸ್​ ಭರತ್​, ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಮೊಹಮ್ಮದ್​ ಸಿರಾಜ್​, ಮೊಹಮ್ಮದ್​ ಶಮಿ, ಕುಲ್​ದೀಪ್​ ಯಾದವ್​, ಉಮೇಶ್​ ಯಾದವ್​, ಜೈದೇವ್​ ಉನಾದ್ಕತ್​, ಇಶಾನ್​ ಕಿಶನ್​.

ಆಸೀಸ್​ ವಿರುದ್ಧದ ಏಕದಿನ ಸರಣಿಗೆ​ ಭಾರತ ತಂಡ

ರೋಹಿತ್​ ಶರ್ಮಾ(ನಾಯಕ), ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಕೆ.ಎಲ್​. ರಾಹುಲ್, ಸೂರ್ಯಕುಮಾರ್​ ಯಾದವ್, ಶ್ರೇಯಸ್​ ಅಯ್ಯರ್​, ಅಕ್ಷರ್​ ಪಟೇಲ್​, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್​, ಮೊಹಮ್ಮದ್​ ಶಮಿ, ಕುಲ್​ದೀಪ್​ ಯಾದವ್​, ಉಮ್ರಾನ್​ ಮಲಿಕ್​​, ಜೈದೇವ್​ ಉನಾದ್ಕತ್​. ಇಶಾನ್​ ಕಿಶನ್​, ಶಾರ್ದೂಲ್ ಠಾಕೂರ್​, ಯಜುವೇಂದ್ರ ಚಹಲ್, ವಾಷಿಂಗ್ಟನ್​ ಸುಂದರ್​.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!