Friday, February 3, 2023

Latest Posts

INTRESTING | ಛತ್ತೀಸ್‌ಗಢ ಸರ್ಕಾರಿ ಕಟ್ಟಡಗಳಿಗೆ ಇನ್ನು ‘ಸಗಣಿ ಪೇಂಟ್’ನ ಹೊಸ ಲುಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾವಯವ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಿರುವ ಛತ್ತೀಸ್‌ಗಢ ಸರ್ಕಾರ ವಿಶಿಷ್ಟ ಮತ್ತು ಪರಿಸರ ಸ್ನೇಹಿ ಉಪಕ್ರಮದ ಭಾಗವಾಗಿ ಗೋವಿನ ಸಗಣಿಯಿಂದ ತಯಾರಿಸಲಾದ ಸಾವಯವ ಪೇಂಟ್ ಬಳಸಲು ಮುಂದಾಗಿದೆ.

ರಾಜ್ಯದ ಎಲ್ಲ ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ತಯಾರಾದ ಸಾವಯವ ಪೇಂಟ್ ಬಳಿಯುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಗೋ ಸಗಣಿಯಿಂದ ಪೇಂಟ್ ತಯಾರಿಸುವುದಕ್ಕಾಗಿ ರಾಯ್‌ಪುರ ಮತ್ತು ಕಾಂಕೇರ್‌ನಲ್ಲಿನ ಗೋಶಾಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿದೆ. 2023ರ ಜನವರಿ ಅಂತ್ಯದ ವೇಳೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಾವಯವ ಪೇಂಟ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿದೆ. ಸಾವಯವ ಪೇಂಟ್ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ನಿಗ್ರಹ ಅಂಶಗಳನ್ನು ಒಳಗೊಂಡಿವೆ ಎಂದು
ಅಧಿಕಾರಿಗಳು ತಿಳಿಸಿದ್ದಾರೆ.

ನೈಸರ್ಗಿಕ ಪೇಂಟ್‌ನ ಬಳಕೆಯು ಪರಿಸರ ಸ್ನೇಹಿ ಮಾತ್ರವಾಗಿರದು. ಬದಲಿಗೆ ಗೋಶಾಲೆಗಳಲ್ಲಿನ ಘಟಕಗಳಲ್ಲಿ ಸ್ಥಳೀಯ ಮಹಿಳೆಯರು ಕಾರ್ಯನಿರ್ವಹಿಸುವುದರಿಂದ ಗ್ರಾಮೀಣ ಆರ್ಥಿಕತೆಗೂ ಸಹಕಾರಿಯಾಗಲಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಸೂರಜಿ ಗಾಂವ್ ಯೋಜನದ ಭಾಗವಾಗಿ 2 ವರ್ಷಗಳ ಹಿಂದೆ ಗೋಧನ್ ನ್ಯಾಯ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಅದರಂತೆ ಈ ಯೋಜನೆಯಲ್ಲಿ 8,000 ಕ್ಕೂ ಹೆಚ್ಚು ಗೋಶಾಲೆಗಳನ್ನು ಸ್ಥಾಪಿಸಿ ಗೋ ಸಗಣಿ ಮತ್ತು ಮೂತ್ರಕ್ಕೆ ಪ್ರತಿ ಕೆಜಿಗೆ ಕ್ರಮವಾಗಿ 2 ರೂ. ಮತ್ತು ಪ್ರತಿ ಲೀಟರ್‌ಗೆ 4 ರೂ.ಗಳಂತೆ ಪಶುಸಾಕಣಿದಾರರಿಂದ ಖರೀದಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!