ಕೆ.ಎಲ್​ ರಾಹುಲ್ ವಿರುದ್ಧ ಎಲ್​​ಎಸ್​​ಜಿ ಮಾಲೀಕ ಗೋಯೆಂಕಾ ವರ್ತನೆಗೆ ಶಮಿ ಬೇಸರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್ ಪಂದ್ಯ (IPL 2024) ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಾಯಕ ಕೆಎಲ್ ರಾಹುಲ್ (KL Rahul) ಮತ್ತು ಸಂಜೀವ್ ಗೋಯೆಂಕಾ ನಡುವಿನ ಮಾತುಕತೆ ಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ರಾಹುಲ್​ಗೆ ಬೆಂಬಲ ವ್ಯಕ್ತಪಡಿಸಿರುವ ಅವರು ಗೊಯೆಂಕಾ ವರ್ತನೆಗೆ ಕಿಡಿಕಾರಿದ್ದಾರೆ.
ಈ ವಿಷಯವನ್ನು ಸಾರ್ವಜನಿಕವಾಗಿ ಮಾತನಾಡುವ ಬದಲು ಡ್ರೆಸ್ಸಿಂಗ್ ಕೋಣೆಯಲ್ಲಿ ಪರಿಹರಿಸಬಹುದಿತ್ತು ಎಂದು ಹೇಳಿದ್ದಾರೆ

ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಬುಧವಾರ ನಡೆದ ಪಂದ್ಯದಲ್ಲಿ ಲಖನೌ ತಂಡ 10 ವಿಕೆಟ್‌ ಮುಖಭಂಗ ಅನುಭವಿಸಿದ ನಂತರ ಆರ್‌ಪಿಜಿ ಸಮೂಹದ ಮುಖ್ಯಸ್ಥ ಸಂಜೀವ್ ಗೋಯಂಕಾ ಅವರು ತಂಡದ ನಾಯಕ ರಾಹುಲ್‌ ವಿರುದ್ಧ ರೇಗಾಡಿದ ಮತ್ತು ರಾಹುಲ್ ಸಂಯಮದಿಂದ ಇರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದೀಗ ಶಮಿ, ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್​​ಗೆ ಸಾರ್ವಜನಿಕವಾಗಿ ಅಗೌರವ ತೋರಿದ್ದಾರೆ ಎಂದು ಟೀಕಿಸಿದರು. ಅಂತಹ ವಿಷಯಗಳನ್ನು ಕ್ಯಾಮೆರಾಗಳ ಮುಂದೆ ಪರಿಹರಿಸುವ ಬದಲು ಖಾಸಗಿಯಾಗಿ ಇತ್ಯರ್ಥಪಡಿಸಬೇಕು ಎಂದು ಹೇಳಿದ್ದಾರೆ.

‘ಇದನ್ನು ಕೋಟಿಗಟ್ಟಲೆ ಜನ ನೋಡುತ್ತಾರೆ. ಕ್ಯಾಮೆರಾಗಳ ಮುಂದೆ ಹೀಗೆ ಮಾಡುವುದು, ಅದಕ್ಕೆ ಜನ ಪ್ರತಿಕ್ರಿಯಿಸವುದು ಇವೆಲ್ಲಾ ನಾಚಿಕೆಗೇಡು. ಆಡುವ ಮಾತುಗಳಿಗೆ ಇತಿಮಿತಿ ಇರಬೇಕು. ಹೀಗೆ ಕೋಪದಿಂದ ಮಾತನಾಡುವುದು ತಪ್ಪು ಸಂದೇಶ ರವಾನಿಸುತ್ತದೆ’ ಎಂದು ಶಮಿ ಕ್ರಿಕ್‌ಬಝ್‌ ಲೈವ್‌ಗೆ ತಿಳಿಸಿದ್ದಾರೆ.

ನೀವು ನಿಮ್ಮ ಅಭಿಪ್ರಾಯಗಳನ್ನು ಹೇಳಲು ಅನೇಕ ವಿಭಿನ್ನ ಮಾರ್ಗಗಳಿವೆ. ಡ್ರೆಸ್ಸಿಂಗ್ ರೂಮ್ ಅಥವಾ ಹೋಟೆಲ್​ನಲ್ಲಿ ಅದೇ ಕೆಲಸವನ್ನು ಮಾಡಬಹುದಿತ್ತು. ಅದನ್ನು ಮೈದಾನದಲ್ಲಿ ಮಾಡುವ ಅಗತ್ಯವಿರಲಿಲ್ಲ. ಈ ರೀತಿ ಮಾಡುವುದು ಗೌರವ ಸಂಕೇತ ಅಲ್ಲ ಎಂದು ಹೇಳಿದ್ದಾರೆ.

ರಾಹುಲ್ ನಾಯಕರೂ ಹೌದು. ಅವರು ಸಾಮಾನ್ಯ ಆಟಗಾರನಲ್ಲ. ಇದು ಒಂದು ತಂಡದ ಆಟ. ಯೋಜನೆ ಯಶಸ್ವಿಯಾಗದಿದ್ದರೆ, ಅದು ದೊಡ್ಡ ವಿಷಯವಲ್ಲ. ಆಟದಲ್ಲಿ ಏನು ಬೇಕಾದರೂ ಸಾಧ್ಯ. ಒಳ್ಳೆಯ ಅಥವಾ ಕೆಟ್ಟ ದಿನಗಳು ಇರಬಹುದು. ಆದರೆ ಪ್ರತಿಯೊಬ್ಬ ಆಟಗಾರನಿಗೆ ಗೌರವವಿದೆ, ಮತ್ತು ಮಾತನಾಡಲು ಒಂದು ಮಾರ್ಗವಿದೆ. ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!