ಬ್ರಿಟೀಷರ ವಿರುದ್ಧ ನಡೆಸಿದ ಚಳುವಳಿಗಳಿಂದ ಪ್ರಖ್ಯಾತಿ ಪಡೆದಿದ್ದರು ಛೋಟೇಲಾಲ್ ಚೌಧರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಛೋಟೇಲಾಲ್ ಚೌಧರಿ ಅವರು 1915 ರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶ್ರೀ ಚಂದ್ರಭಾನ್ ಅಗರ್ವಾಲ್. ಅವರು ಮಹಾಸಮುಂಡ್‌ನ ಅರಣ್ಯ ಗ್ರಾಮವಾದ ಖಟ್ಟಿ ನಿವಾಸಿಯಾಗಿದ್ದರು. ಡಿಸೆಂಬರ್ 1920 ರಲ್ಲಿ ಗಾಂಧೀಜಿ ಛತ್ತೀಸ್‌ಗಢಕ್ಕೆ ಆಗಮಿಸಿದ ವೇಳೆ ಅವರ ಪ್ರಭಾವದಿಂದ ಇಡೀ ಚೌಧರಿ ಕುಟುಂಬವು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿತು.
ಛೋಟೆಲಾಲ್ ಜಿ ಅವರು ಸೆಪ್ಟೆಂಬರ್ 1930 ರಲ್ಲಿ ಭಗವತಿ ಪ್ರಸಾದ್ ಮಿಶ್ರಾ ಅವರ ನೇತೃತ್ವದಲ್ಲಿ ತಮೋರಾ ಜಂಗಲ್ ಸತ್ಯಾಗ್ರಹದಲ್ಲಿ ಕುಟುಂಬದ ಹಿರಿಯರಾದ ಚೌತ್ಮಾಲ್ ಅವರೊಂದಿಗೆ ಭಾಗವಹಿಸಿದರು. ತಮ್ಮ  ಯೌವನದ ದಿನಗಳಲ್ಲಿ ರಾಯಪುರಕ್ಕೆ ಬಂದು ಹಲವಾರು ಚಳವಳಿಗಳಲ್ಲಿ ಭಾಗವಹಿಸತೊಡಗಿದರು. ಮಹಾಸಮುಂದದ ಪ್ರಮುಖ ನಾಯಕರಾದ ಯತಿಯತನ್ ಲಾಲ್ ಜಿ, ಅದ್ವೈತಗಿರಿ ಗೋಸ್ವಾಮಿ ಮುಂತಾದವರ ಜೊತೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಜಾಗೃತಿ ಮೂಡಿಸಲು0 ಹಳ್ಳಿ ಹಳ್ಳಿಗೆ ತಿರುಗಾಡುತ್ತಿದ್ದರು.
1940 ರಲ್ಲಿ ಲಾಲ್ಜಿಯವರ ಆಶ್ರಮ ಸೇರಿ ಸತ್ಯಾಗ್ರಹದಲ್ಲಿ ತರಬೇತಿ ಪಡೆದು ಸತ್ಯಾಗ್ರಹ ಚಳುವಳಿ ಸೇರಿದರು. ಡಿಸೆಂಬರ್ 1941 ರಲ್ಲಿ ಬ್ರಿಟೀಷರ ವಿರುದ್ಧ ಭಾಷಣಗಳನ್ನು ಮಾಡಿದ್ದಕ್ಕಾಗಿ ಮತ್ತು ಯುದ್ಧ-ವಿರೋಧಿ ಘೋಷಣೆಗಳನ್ನು ಎತ್ತಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು ಮತ್ತು ಹಲವಾರು ತಿಂಗಳ ಕಾಲ ಶಿಕ್ಷೆ ವಿಧಿಸಲಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಭೂಗತ ಚಳವಳಿಯಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಸರ್ಕಾರದ ವಿರುದ್ಧ ಕರಪತ್ರ ಹಂಚಿ, ಸಭೆ ನಡೆಸಿದ್ದಕ್ಕೆ 6 ತಿಂಗಳು ಜೈಲು ವಾಸ ಅನುಭವಿಸಿದ್ದರು. ಅವರು 1967 ರಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!