September 14, 2026
Monday, September 14, 2026
spot_img

PARENTING | ಜಾಸ್ತಿ ಗಲಾಟೆ ಮಾಡೋ ಮಕ್ಕಳು ಸಂತೋಷವಾಗಿ ಇದ್ದಾರೆ ಅಂತರ್ಥ!

ಮಕ್ಕಳು ಸಿಕ್ಕಾಪಟ್ಟೆ ಗಲಾಟೆ ಮಾಡ್ತಾರೆ, ಸಿಕ್ಕಿದ್ದೆಲ್ಲಾ ಕೀಳ್ತಾರೆ, ಕಂಡಿದ್ದೆಲ್ಲಾ ಹಾಳು ಮಾಡ್ತಾರೆ, ಜೋರಾಗಿ ಮಾತಾಡ್ತಾರೆ, ಜಗಳ ಮಾಡ್ತಾರೆ ಎಂದು ಸಿಟ್ಟು ಹಾಗೂ ಕಿರಿಕಿರಿ ಮಾಡಿಕೊಳ್ಳಬೇಡಿ. ಇವೆಲ್ಲ ಮಾನಸಿಕ ಸಮಸ್ಯೆಗಳಿಲ್ಲದೆ ಖುಷಿಯಾಗಿರುವ ಮಕ್ಕಳ ಲಕ್ಷಣ. ಖುಷಿಯಾಗಿರುವ ಮಕ್ಕಳು ಇನ್ನೇನೆಲ್ಲಾ ಮಾಡ್ತಾರೆ?

ಅವರಿಗೆ ಬೇರೆ ಮಕ್ಕಳ ಜೊತೆ ಆಟ ಆಡೋದಕ್ಕೆ ಇಷ್ಟ. ಕೆಲವೊಮ್ಮೆ ಯಾರೂ ಇಲ್ಲ ಎಂದರೂ ಅವರೇ ಟೀಚರ್‌ ಅವರೇ ಸ್ಟೂಡೆಂಟ್ಸ್‌ ಹೀಗೆ ಸ್ನೇಹಿತರನ್ನು ಇಮ್ಯಾಜಿನ್‌ ಮಾಡಿಕೊಂಡು ಆಟ ಆಡುತ್ತಾರೆ.

ಈ ಮಕ್ಕಳು ಸುಮ್ಮನೆ ಒಂದು ಸಾವಿರ ಪ್ರಶ್ನೆ ಕೇಳುತ್ತಾರೆ. ಏನು? ಯಾಕೆ? ಹೇಗೆ? ಎಂದು ಕೇಳುತ್ತಲೇ ಇರುತ್ತಾರೆ. ತಮ್ಮ ಭಾವನೆಗಳನ್ನು ತೋರಿಸೋಕಾಗದೇ ಖುಷಿಯಿಂದ ಜೋರು ದನಿಯಲ್ಲಿ ಮಾತನಾಡುತ್ತಾರೆ.

ಹಾರೋದು, ಕುಣಿಯೋದು, ಜಂಪ್‌ ಮಾಡೋದು,ಡ್ಯಾನ್ಸ್‌ ಮಾಡೋದು ಮಾಮೂಲಿ. ನಡೆಯೋದು ತುಂಬಾ ಕಡಿಮೆ.

ಕಾನ್ಫಿಡೆನ್ಸ್‌ ಬರುತ್ತದೆ. ತಂತಾನೇ ಕೆಲಸ ಮಾಡೋಕೆ ಇಷ್ಟಪಡ್ತಾರೆ.

ಮಕ್ಕಳಿಗೆ ತಮ್ಮ ಭಾವನೆಗಳು, ಎಮೋಷನ್ಸ್‌ ಚೆನ್ನಾಗಿ ತಿಳಿದಿರುತ್ತದೆ. ಖುಷಿ, ನೋವು, ಬೇರೆಯವರ ನೋವಿಗೆ ಸ್ಪಂದಿಸುವ ಬುದ್ಧಿ ಇರುತ್ತದೆ. ಕಂಟ್ರೋಲ್‌ ಇಲ್ಲದೆ ನಗೋದು, ಅಳೋದು, ಅರ್ಥವಿಲ್ಲದ ಮಾತಾಡೋದು ಇಷ್ಟ.

ಹೊಸ ಪುಸ್ತಕ ಓದಿ ಖುಷಿ ಪಡೋದು, ಹೊಸ ಆಟಸಾಮಾನಿಗೆ ಸಂತಸ ವ್ಯಕ್ತಪಡಿಸ್ತಾರೆ.

ಖುಷಿಯಾಗಿರುವ ಮಕ್ಕಳು ಪೋಷಕರಿಂದ ಕೆಲ ಕಾಲ ಬೇರ್ಪಡೋಕೆ ಬೇಜಾರಾಗೋದಿಲ್ಲ. ಅಪ್ಪ ಅಮ್ಮನೇ ಬೇಕು ಎಂದರೆ ಅವರ ಬಳಿ ಹೋಗೋದಕ್ಕೆ ಕ್ಷಣವೂ ಯೋಚಿಸೋದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !