ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಯುದ್ಧಭೂಮಿಯಿಂದ ತಮ್ಮವರನ್ನು ರಕ್ಷಿಸಲು ನೇಪಾಳ ಕೂಡ ಮುಂದಾಗಿದ್ದು, ವಿದ್ಯಾರ್ಥಿಗಳ ಮೊದಲ ಬ್ಯಾಚ್ ಕಠ್ಮಂಡು ತಲುಪಿದ್ದಾರೆ. ವಿದ್ಯಾರ್ಥಿಗಳನ್ನು ಕರೆತರಲು ಗುರುವಾರ ಬೆಳಿಗ್ಗೆ ಟೆಲ್ ಅವೀವ್‌ಗೆ ಹಾರಿದ ನೇಪಾಳ ಏರ್‌ಲೈನ್ಸ್ ವೈಡ್-ಬಾಡಿ ವಿಮಾನವು ಶುಕ್ರವಾರ ಮುಂಜಾನೆ 3 ಗಂಟೆಗೆ (ಸ್ಥಳೀಯ ಕಾಲಮಾನ) ಕಠ್ಮಂಡುವಿನಲ್ಲಿ ಬಂದಿಳಿಯಿತು.
ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಾ, ರಾಷ್ಟ್ರದ ವಿದೇಶಾಂಗ ವ್ಯವಹಾರಗಳ ಸಚಿವ ಎನ್‌ಪಿ ಸೌದ್ ಸ್ಥಳಾಂತರಿಸುವಿಕೆಯ ಮೊದಲ ಬ್ಯಾಚ್‌ನಲ್ಲಿ 254 ವಿದ್ಯಾರ್ಥಿಗಳ ಆಗಮನವನ್ನು ದೃಢಪಡಿಸಿದರು. ಇನ್ನೂ 249 ವಿದ್ಯಾರ್ಥಿಗಳು ಇಸ್ರೇಲ್‌ನಲ್ಲಿ ಏರ್‌ಲಿಫ್ಟ್‌ಗಾಗಿ ಕಾಯುತ್ತಿರುವುದಾಗಿ ತಿಳಿಸಿದರು.
ಟೆಲ್ ಅವಿವ್‌ನಲ್ಲಿರುವ ನೇಪಾಳ ರಾಯಭಾರ ಕಚೇರಿಯಲ್ಲಿ ಇಲ್ಲಿಯವರೆಗೆ ಒಟ್ಟು 557 ನೇಪಾಳಿ ನಾಗರಿಕರು ತಾಯ್ನಾಡಿಗೆ ಮರಳಲು ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ, ಅವರಲ್ಲಿ 254 ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಯತ್ನಗಳ ಮೊದಲ ಹಂತ ಯಶಸ್ವಿಯಾಗಿದೆ.