Sunday, June 4, 2023

Latest Posts

ಮೊದಲನೇ ದಿನವೇ 41 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಮಕ್ಕಳಿಗೆ ಕೊರೋನಾ ಲಸಿಕೆ ವಿತರಣಾ ಅಭಿಯಾನ ನಿನ್ನೆಯಿಂದ ಆರಂಭವಾಗಿದೆ.
ಅಂಕಿ ಅಂಶಗಳ ಪ್ರಕಾರ ಲಸಿಕಾ ಅಭಿಯಾನದ ಮೊದಲ ದಿನ 41 ಲಕ್ಷಕ್ಕೂ ಹೆಚ್ಚು ಮಕ್ಕಳು ಕೋವಿಡ್-19 ಲಸಿಕೆಗಳ ಮೊದಲ ಡೋಸ್ ಪಡೆದಿದ್ದಾರೆ.

15-18 ವರ್ಷ ವಯಸ್ಸಿನವರಿಗೆ 41,27,468 ಡೋಸ್ ಕೋವ್ಯಾಕ್ಸಿನ್ ನೀಡಲಾಗಿದ್ದರೆ, ಒಟ್ಟಾರೆ ವ್ಯಾಕ್ಸಿನೇಷನ್ ಅಂಕಿ ಅಂಶ 146.71 ಕೋಟಿಗೆ ತಲುಪಿದೆ.
ಕಳೆದ 24  ಗಂಟೆಯಲ್ಲಿ 33,750 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,45,582ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ರೇಟ್ ಶೇ.3.84ರಷ್ಟಿದೆ.

ಅಧಿಕೃತ ಮಾಹಿತಿ ಪ್ರಕಾರ ಮಧ್ಯಪ್ರದೇಶ ಮತ್ತು ಗುಜರಾತ್ ಲಸಿಕೆ ನೀಡಿಕೆಯಲ್ಲಿ ಅಗ್ರಸ್ಥಾನದಲ್ಲಿವೆ. ಮಧ್ಯಪ್ರದೇಶದಲ್ಲಿ 7,71,615 ಮತ್ತು ಗುಜರಾತ್‌ನಲ್ಲಿ 5,55,312 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ 4,87,269, ಕರ್ನಾಟಕದಲ್ಲಿ 4,14,723 ಮತ್ತು ರಾಜಸ್ಥಾನದಲ್ಲಿ 3,57,018 ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!